Showing 20 of 2247 posts • Page 33 of 113
ಮೈಸೂರು : ಮುಸುಕುಧಾರಿಗಳಿಂದ ಹಸು ಕಳ್ಳತನವಾಗಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ. ಕಾರಿನಲ್ಲಿ ಬಂದು ಹಸುವನ್ನ ಕಾರಿಗೆ ಹತ್ತಿಸಿಕೊಂಡು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಮುಸುಕುಧಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಒಕ್ಕಲಗೇರಿ ನಿವಾಸಿ ಶಿವಕುಮಾರ್ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ. 27 ಸಾವಿರ ಮೌಲ್ಯದ ಒಟ್ಟು ಐದು ಹಸುಗಳು ಕಳ್ಳತನವಾಗಿದೆ. ದೇವಸ್ಥಾನಕ್ಕೆ ಬಿಟ್ಟಿದ ಗೂಳಿ ಸೇರಿ 5 ಹಸುಗಳ ಕಳ್ಳತನವಾಗಿದೆ. ನಂಜನಗೂಡು ಜನರು ಬೆಚ್ಚಿ ಬಿದ್ದಿದ್ದಾರೆ.
ನಂಜನಗೂಡು ತಾಲೂಕಿನ ಬಳ್ಳೂರುಹುಂಡಿ ಗ್ರಾಮದಲ್ಲಿ ಆನೆಗಳ ಉಪಟಳ ಹೆಚ್ಚಾಗಿದ್ದು, ಇಂದು ಬೆಳಗ್ಗೆ
ಸರಗಳ್ಳತನಕ್ಕೆ ಯತ್ನಿಸಿದ ಇಬ್ಬರು ಯುವಕರು ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ಘಟನೆ ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೋಗಿಗಳಿಂದ ಹಣ ಪಡೆದು ಚಿಕಿತ್ಸೆ ನೀಡಿದ ಆರೋಪದ ಹಿನ್ನಲೆ ಹುಣಸೂರು ತಾಲೂಕು ಹನಗೂಡು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಹೇಮಂತ್ ಕುಮಾರ್ ಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಆದಷ್ಟು ಬೇಗ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದರು.
ಎರಡು ವರ್ಷಗಳಿಂದ ಪತ್ನಿಯಿಂದ ದೂರವಾಗಿದ್ದ ಪತಿ ರಾತ್ರೋರಾತ್ರಿ ದಿಢೀರನೆ ಪ್ರತ್ಯಕ್ಷವಾಗಿ ಪತ್ನಿಯನ್ನು ಕೊಂದ ಘಟನೆ ನಂಜನಗೂಡು ತಾಲೂಕಿನ ಕಳಲೆ ಗ್ರಾಮದಲ್ಲಿ ನಡೆದಿದೆ.
ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಎನ್.ಆರ್.ಠಾಣೆ ಪೊಲೀಸರು ಮೂವರು ಯುವಕರನ್ನ ಬಂಧಿಸಿ ಕಂಬಿ ಎಣಿಸಲು ಕಳಿಸಿದ್ದಾರೆ.
ಗುಂಡ್ಲುಪೇಟೆ ಪಟ್ಟಣದಲ್ಲಿ ಡಿ 27 ರಂದು ನಡೆದ ಹನುಮ ಜಯಂತಿ ಆಚರಣೆ ಸಮಿತಿ ಸದಸ್ಯರ ವಿರುದ್ಧ ಪೊಲೀಸ್ ಇಲಾಖೆ ದುರುದ್ದೇಶಪೂರಕವಾಗಿ ಎಫ್ ಐ ಆರ್ ದಾಖಲಿಸಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ದೇವಾಲಯದ ಚೈನ್ ಗೇಟ್ ಬಳಿ ಒಂಟಿ ಸಲಗವೊಂದು ದಾಂಧಲೆ ನಡೆಸಿದೆ. ಗಜರಾಜನ ಆಕ್ರೋಶಕ್ಕೆ 5 ಬೈಕ್ ಗಳು ಚಿಂದಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿ ದೇವಾಲಯ ಬಳಿ ಇರುವ ಚೈನ್ ಗೇಟ್ ಬಳಿ ನಡೆದಿದೆ.
ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಪಡಿತರ ಕಾಳಸಂತೆ ಮುಂದುವರಿದಿದ್ದು, ಮೈಸೂರು ಜಿಲ್ಲೆಯಲ್ಲಿ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿದೆ.
ಅಪ್ರಾಪ್ತೆಯ ಹಿಂದೆ ಬಿದ್ದು ಪ್ರೀತಿಸುವಂತೆ ಒತ್ತಾಯಿಸಿ ಮದುವೆ ಆಗುವಂತೆ ಪೀಡಿಸಿ ಮಾನಸಿಕ ಕಿರುಕುಳ ನೀಡಿದ ಹಿನ್ನಲೆ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಂಜನಗೂಡಿನ ನೀಲಕಂಠನಗರದಲ್ಲಿ ನಡೆದಿದೆ.
ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದ್ದು ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ.
ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಸಿದ್ದರಾಮಯ್ಯ ಭಾಜನರಾದ ಹಿನ್ನೆಲೆ ಅಹಿಂದಾ ಸಂಘಟನೆ, ಯುವಕರು, ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಸಂಭ್ರಮಿಸಿ ಸಿಹಿ ಹಂಚಿ ಬಿರಿಯಾನಿ ವಿತರಣೆ ಮಾಡಿದರು.
ರಾಜ್ಯ ರಾಜಕಾರಣಕ್ಕೆ ಪ್ರತಾಪಸಿಂಹ ಎಂಟ್ರಿ ವಿಚಾರವಾಗಿ ಮೈಸೂರಿನಲ್ಲಿ ಸಂಸದ ಯದುವೀರ್ ಒಡೆಯರ್ ಹೇಳಿಕೆ ನೀಡಿದ್ದಾರೆ.
112 ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ನಂಜನಗೂಡು ತಾಲ್ಲೂಕಿನ ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನದಗುಡಿ ಹುಂಡಿ ಗ್ರಾಮದಲ್ಲಿ ನಡೆದಿದೆ.
ಹುಲಿ ಆತಂಕ ಮೈಸೂರಿನಲ್ಲಿ ಎದುರಾಗಿದ್ದು, ಬೆಳ್ಳಂಬೆಳಗ್ಗೆ ಮಂಡಕಹಳ್ಳಿ ವಿಮಾನ ನಿಲ್ದಾಣದ ಬಳಿ ಹುಲಿ ಕಾಣಿಸಿಕೊಂಡಿದೆ.
ಮೈಸೂರು : ಸುಮಾರು ಹತ್ತು ಲಕ್ಷ ಮೌಲ್ಯದ ಅಡಿಕೆ ದೋಚಿದ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆಯಲ್ಲಿ ನಡೆದಿದೆ. ಟಿಬೆಟಿಯನ್ ರೈತನ ಅಡಿಕೆ ತೋಟಕ್ಕೆ ಖನ್ನ ಹಾಕಿದ್ದಾರೆ. ಗುಳ್ಳೇದಲ್ಲ ಟಿಬೇಟ್ ಕ್ಯಾಂಪಿನ ನಿವಾಸಿ ಚಂಬಾ ಎಂಬ ರೈತನಿಗೆ ಸೇರಿದ ಅಡಿಕೆ ತೋಟ ಇದಾಗಿದೆ. ತಿರುಮಲಾಪುರ ಗ್ರಾಮದ ಮುಖ್ಯ ರಸ್ತೆಯ ಅಂಚಿನಲ್ಲಿ ಇರುವ ಟಿಬೆಟಿಯನ್ ರೈತನ ತೋಟವಾಗಿದ್ದು, ಕಳೆದ ಐದು ವರ್ಷದಿಂದ 2 ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆದಿದ್ದರು. ಕೊಯ್ದು ಗುಡ್ಡೆ ಹಾಕಿದ್ದ ಅಸಿ ಅಡಿಕೆಯನ್ನು ಕಿಡಿಗೇಡಿಗಳು ದೋಚಿದರು. ಒಂದೇ […]
ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಕಿರಗುಂದ ಗ್ರಾಮದಲ್ಲಿ ಬೇರೊಬ್ಬರ ಜಮೀನಿನಲ್ಲಿ ವ್ಯಕ್ತಿಯೊಬ್ಬರಿಗೆ ಅಕ್ರಮವಾಗಿ ಗ್ರಾಮ ಪಂಚಾಯಿತಿ ಫ್ಲೋರ್ ಮಿಲ್ ನಿರ್ಮಾಣಕ್ಕೆ ಪರವಾನಗಿ ನೀಡಿದ್ದಾರೆ
ನಂಜನಗೂಡು ತಾಲ್ಲೂಕು ಹುಲ್ಲಹಳ್ಳಿ ಹೋಬಳಿ ಕಪಿಲಾ ನದಿ ದಂಡೆಯ ಬಳಿ ನಿಂತು ಕಣ್ಣು ಹಾಯಿಸಿದರೆ ಕಂಡುಬರುವುದೇ 11ನೇ ಶತಮಾನದ ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮಿ ವರದರಾಜಸ್ವಾಮಿ ದೇವಾಲಯ ಹಾಗೂ ಶ್ರೀ ಯೋಗಭೋಗ ನರಸಿಂಹಸ್ವಾಮಿ ದೇವಾಲಯ.
ಚಲಿಸುತ್ತಿದ್ದ ರೈಲಿಗೆ ಸಿಲುಕಿ ನಿವೃತ್ತ ಎಎಸ್ಐ ಪೊಲೀಸ್ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಕುಕ್ಕರಹಳ್ಳಿ ಕೆರೆ ಜಂಕ್ಷನ್ ಬಳಿ ನಡೆದಿದೆ.