ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕಳೆದ ಬಾರಿಗಿಂತ ಈ ಬಾರಿ ಆದಾಯದಲ್ಲಿ ಕುಸಿತ ಕಂಡಿದೆ. ದೇವಾಲಯದ ದಾಸೋಹ ಭವನದಲ್ಲಿ ಹುಂಡಿ ಎಣಿಕೆ ಕಾರ್ಯ ಮಾಡಲಾಗಿದ್ದು, ಒಂದೇ ತಿಂಗಳಿನಲ್ಲಿ 82 ಲಕ್ಷ ರೂ. ಕಾಣಿಕೆ ಬಂದಿದೆ.

ನಂಜುಂಡೇಶ್ವರ ದೇವಾಲಯದಲ್ಲಿರುವ ಎಲ್ಲ ಹುಂಡಿಗಳನ್ನು ದೇವಸ್ಥಾನದ ಸಿಬ್ಬಂದಿ ಹಾಗೂ ಬ್ಯಾಂಕ್ ಬರೋಡ ಸಿಬ್ಬಂದಿಗಳು ಹುಂಡಿ ಎಣಿಕೆ ಮಾಡಿದ್ದು, ಹುಂಡಿಯಲ್ಲಿ 82,30,313 ರೂ‌‌., ನಗದು ಸಂಗ್ರಹವಾಗಿದೆ. ಅಲ್ಲದೇ 19ಗ್ರಾಂ ಚಿನ್ನ, 990 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಯುಎಸ್ ಎ-1, ಆಸ್ಟ್ರೇಲಿಯಾ-3, ಇಂಗ್ಲೆಂಡ್ ಪೌಂಡ್-2, ಅರಬ್ -1, ಭೂತನ್-3, ಮಲೆಷಿಯಾ-1,ಇಂಗ್ಲೆಂಡ್ ಕಾಯಿನ್ ಪೌಂಡ್1-34,ಇಂಗ್ಲೆಂಡ್ ಕಾಯಿನ್ ಪೌಂಡ್2-01 ಸೇರಿದಂತೆ 47 ವಿದೇಶಿ ಕರೆನ್ಸಿಗಳು ನಂಜುಂಡನಿಗೆ ಕಾಣಿಕೆಯಾಗಿ ಬಂದಿವೆ.

ಕುಸಿತ ಕಂಡ ಆದಾಯ
ಪ್ರತಿ ತಿಂಗಳು ನಂಜುಂಡೇಶ್ವರನ ಹುಂಡಿ ಎಣಿಕೆ ಮಾಡಿದಾಗ, ಕೋಟಿ ರೂ. ದಾಟುತ್ತಿದ್ದ ಆದಾಯ ಈಬಾರಿ ಕುಸಿತ ಕಂಡಿದೆ. ಅಲ್ಲದೆ ವಿಶೇಷ ತಿಂಗಳಿನಲ್ಲಿ 1 ರಿಂದ 2 ಕೋಟಿ ರೂ. ಸಂಗ್ರಹವಾಗಿತ್ತು. ಆದರೆ, ಈಬಾರಿ ಒಂದು ತಿಂಗಳಿನಲ್ಲಿ 82 ಲಕ್ಷ ರೂ.ಆದಾಯ ಸಂಗ್ರಹವಾಗಿದೆ.