ಕೆ.ಆರ್.ನಗರ; ಸಂಬಂಧಿಕರೊಬ್ಬರ ಸಾವಿನ ಅಂತಿಮ ದರುಶನಕ್ಕೆ ತೆರಳುತ್ತಿದ್ದ ದಂಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರಂತ ಘಟನೆ ಕೆ.ಆರ್.ನಗರ ನಾರಾಯಣಪುರದ ಕೆಗ್ಗೆರೆ ಬಳಿ ನಡೆದಿದೆ.
ನಂಜುಂಡಸ್ವಾಮಿ(50) ಹಾಗೂ ನೇತ್ರಾವತಿ(45) ಮೃತ ದುರ್ದೈವಿಗಳು. ಹುಣಸೂರಿನಿಂದ ಗೇರನಳ್ಳಿ ರಸ್ತೆ ಮೂಲಕ ಕೇರಳಾಪುರಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ KA05 MM3700 ನೊಂದಣಿ ಸಂಖ್ಯೆಯ ಕಾರ್ ಬೈಕ್ ಗೆ ಢಿಕ್ಕಿ ಹೊಡೆದಿದೆ.ಸ್ಥಳದಲ್ಲೇ ದಂಪತಿ ಮೃತಪಟ್ಟಿದ್ದಾರೆ.

