ಮೈಸೂರು: ದಕ್ಷಿಣ ಕಾಶಿಯೆಂದೇ ಖ್ಯಾತಿಗಳಿಸಿರುವ ನಂಜುಂಡೇಶ್ವರಿಗೆ, ಒಂದೇ ತಿಂಗಳಿನಲ್ಲಿ 82 ಲಕ್ಷ ರೂ., ಕಾಣಿಕೆ ಬಂದಿದೆ.
ನಂಜುಂಡೇಶ್ವರ ದೇವಾಲಯದಲ್ಲಿರುವ ಎಲ್ಲ ಹುಂಡಿಗಳನ್ನು ದೇವಸ್ಥಾನದ ಸಿಬ್ಬಂದಿ ಹಾಗೂ ಬ್ಯಾಂಕ್ ಬರೋಡ ಸಿಬ್ಬಂದಿಗಳು, ದೇವಸ್ಥಾನ ಸಮೀಪ ಇರುವ ದಾಸೋಹ ಭವನದಲ್ಲಿ ಹುಂಡಿ ಎಣಿಕೆ ಮಾಡಿದ್ದು, ಹುಂಡಿಯಲ್ಲಿ 82,30,313 ರೂ., ನಗದು ಸಂಗ್ರಹವಾಗಿದೆ.
ಅಲ್ಲದೇ 19ಗ್ರಾಂ ಚಿನ್ನ, 990 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಯುಎಸ್ ಎ-1, ಆಸ್ಟ್ರೇಲಿಯಾ-3, ಇಂಗ್ಲೆಂಡ್ ಪೌಂಡ್-2, ಅರಬ್ -1, ಭೂತನ್-3, ಮಲೆಷಿಯಾ-1,ಇಂಗ್ಲೆಂಡ್ ಕಾಯಿನ್ ಪೌಂಡ್1-34,ಇಂಗ್ಲೆಂಡ್ ಕಾಯಿನ್ ಪೌಂಡ್2-01 ಸೇರಿದಂತೆ 47 ವಿದೇಶಿ ಕರೆನ್ಸಿಗಳು ಸಿಕ್ಕಿವೆ.
ಕುಸಿತ ಕಂಡ ಆದಾಯ
ಪ್ರತಿ ತಿಂಗಳು ನಂಜುಂಡೇಶ್ವರನ ಹುಂಡಿ ಎಣಿಕೆ ಮಾಡಿದಾಗ, 1ಕೋಟಿ ರೂ., ಮೇಲೆ ಸಂಗ್ರಹವಾಗುತ್ತಿತ್ತು.ಅಲ್ಲದೇ ಜಾತ್ರೆ ಸಂದರ್ಭದಲ್ಲಿ ತಿಂಗಳಿನಲ್ಲಿ 2ಕೋಟಿ ರೂ.,ಸಂಗ್ರಹವಾಗಿತ್ತು.ಆದರೆ, ಒಂದು ತಿಂಗಳಿನಲ್ಲಿ 80 ಲಕ್ಷ ರೂ.ಆದಾಯ ಸಂಗ್ರಹವಾಗಿದೆ.

