ಮೈಸೂರು: ಲವ್ ಮ್ಯಾಟರ್ ಹಿನ್ನಲೆ ದ್ವೇಷ ಬೆಳೆಸಿಕೊಂಡ ಯುವಕನ ಕೊಲೆಗೆ ಮಾರಕಾಸ್ತ್ರಗಳ ಸಮೇತ ಬಂದಿದ್ದ ಗ್ಯಾಂಗ್ ಸ್ಕೆಚ್ ವಿಫಲವಾಗಿದೆ. ಪರಾರಿಯಾದ ಕೆಲವೇ ಗಂಟೆಗಳಲ್ಲಿ ಆಲನಹಳ್ಳಿ ಪೊಲೀಸರು ಆರೋಪಿಗಳ ಹೆಡೆಮುರಿಕಟ್ಟಿ ಕಂಬಿ ಎಣಿಸಲು ಕಳಿಸಿದ್ದಾರೆ.

ಗಗನ್ ಎಂಬ ಯುವಕನ ಕೊಲೆಗೆ ಲಾಂಗ್,ಚಾಕು ಜೊತೆ ಬಂದ ಮೂವರ ಗ್ಯಾಂಗ್ ಸ್ಥಳೀಯರ ಆಗಮನದಿಂದ ವಿಫಲವಾಗಿ ಪರಾರಿಯಾಗಿದ್ದರು. ಈ ಸಂಬಂಧ ಗಗನ್ ತಾಯಿ ಸುಧಾ ಎಂಬುವರು ಕ್ಯಾತಮಾರನಹಳ್ಳಿ ನಿವಾಸಿಗಳಾದ ವಿನೋದ್, ರಾಕೇಶ್ ಹಾಗೂ ಮತ್ತೊಬ್ಬನ ವಿರುದ್ದ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.

ರಾಕೇಶ್ ಎಂಬಾತ ಗಗನ್ ಅತ್ತೆ ಮಗಳನ್ನ ಲವ್ ಮಾಡಿದ್ದ.ಈ ವಿಚಾರದಲ್ಲಿ ಗಗನ್ ಜಗಳ ಮಾಡಿದ್ದ.ಈ ಹಿನ್ನಲೆ ದ್ವೇಷ ಬೆಳೆಸಿಕೊಂಡ ರಾಕೇಶ್ ಸ್ನೇಹಿತ ವಿನೋದ್ ಹಾಗೂ ಕಿರಣ್ ಸಮೇತ ಗಗನ್ ವಾಸವಿದ್ದ ಲಲಿತಾದ್ರಿಪುರ ಮನೆಗೆ ಮಾರಕಾಸ್ತ್ರಗಳ ಸಮೇತ ಆಟೋದಲ್ಲಿ ಬಂದು ಸ್ಕೆಚ್ ಹಾಕಿದ್ದ.ಈ ಮಾಹಿತಿ ಅರಿತ ಗಗನ್ ಸ್ನೇಹಿತ ಶಿವು ಎಂಬಾತ ಲಾಂಗ್ ಹಿಡಿದಿದ್ದ ರಾಕೇಶ್ ನ ಹಿಡಿದಿದ್ದಾನೆ.ಈ ವೇಳೆ ಗಲಾಟೆ ನಡೆದಾಗ ನೆರೆಮನೆಯವರು ಆಗಮಿಸಿದ್ದಾರೆ.ಜನ ಸೇರಿದ ಹಿನ್ನಲೆ ಮೂವರ ತಂಡ ಪರಾರಿಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿದ ಆಲನಹಳ್ಳಿ ಠಾಣೆ ಪೊಲೀಸರು ಪುಡಿ ಗ್ಯಾಂಗ್ ಸೆದೆಬಡಿದು ಜೈಲಿಗಟ್ಟಿದ್ದಾರೆ.