ಮೈಸೂರು : ಒಳ ಮೀಸಲಾತಿ ಗೊಂದಲ ವಿಚಾರವಾಗಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿದರು. ಒಳ ಮೀಸಲಾತಿ ವಿಚಾರವು ಕಾನೂನು ಮುಖಾಂತರವೇ ಎಲ್ಲವು ಸಾಗುತ್ತಿದೆ. ಕೆಲವರು ಪರ- ವಿರೋಧದ ಬಗ್ಗೆ ಮಾತನಾಡುತ್ತಿದ್ದಾರೆ. ಯಾರು ಮಾತನಾಡುತ್ತಾರೋ ಮಾತನಾಡಲಿ ಬಿಡಿ ಎಂದರು.
ಇದು ಪ್ರಜಾಪ್ರಭುತ್ವ, ಎಲ್ಲರಿಗೂ ಮಾತನಾಡುವ ಅವಕಾಶವಿದೆ. ಆದರೆ ಎಲ್ಲವು ಸಂವಿಧಾನದ ಅಡಿಯಲ್ಲಿ ನಡೆಯುತ್ತಿದೆ. ಇದರಲ್ಲಿ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚೆಯಾದದ್ದನ್ನು ಬಹಿರಂಗಪಡಿಸಬೇಕೆಂದೇನು ಇಲ್ಲ ಎಂದ ಸಚಿವ ಡಾ ಹೆಚ್ ಸಿ ಮಹದೇವಪ್ಪ ಹೇಳಿದರು.

