ಗುಂಡ್ಲುಪೇಟೆ : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಒಳಮೀಸಲಾತಿ ಪದ್ಧತಿಯು ಬಲಗೈ ಸಮುದಾಯದ ಮರಣ ಶಾಸನವಾಗಿದ್ದು ಇದನ್ನ ತಕ್ಷಣವೇ ಹಿಂಪಡೆಯಬೇಕು ಎಂದು ಡಾ.ನವೀನ್ ಮೌರ್ಯ ಒತ್ತಾಯಿಸಿದರು.
ಗುಂಡ್ಲುಪೇಟೆ ಪಟ್ಟಣದಲ್ಲಿಂದು ಮಾತನಾಡಿದ ಅವರು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಸಮಾನ ಅವಕಾಶ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ಪ್ರವರ್ಗ ಎ , ಬಿ, ಸಿ, ಎಂದು 101 ಜಾತಿಗಳಾಗಿ ವಿಂಗಡಿಸಿ ಆದೇಶ ಹೊರಡಿಸಿದೆ ಇದರಲ್ಲಿ ಹಲವಾರು ಗೊಂದಲಗಳಿಗೆ ಕಾರಣವಾಗಿರುವ ಸರ್ಕಾರ ಕೂಡಲೇ ನಿವಾರಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ಪ್ರವರ್ಗ ಎ,ಬಿ,ಸಿ, ಮೂರು ಗುಂಪುಗಳನ್ನ ವಿಂಗಡಿಸಿ ಮೀಸಲಾತಿ ಮಾಡಿದ್ದು ಧಾರವಾಡ ಯೂನಿವರ್ಸಿಟಿ ಹಾಗೂ ಬಿಬಿಎಂಪಿ ಯಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಅವುಗಳ ಪೈಕಿ 10 ಕ್ಕೆ 10 ಪೋಸ್ಟ್ಗಳನ್ನ ಪ್ರವರ್ಗ ಎ ಗೆ ಮೀಸಲಿಟ್ಟಿದ್ದಾರೆ.
ಸರ್ಕಾರದ ನಿಲುವಿನಂತೆ ಸಾಮಾಜಿಕವಾಗಿ ,ಔದ್ಯೋಗಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಎಂದು ಆದ್ಯತೆ ನೀಡಲಾಗಿದೆ ಅಷ್ಟೇ ಹಿಂದುಳಿದಿರುವ ಬಲಗೈ ಸಂಬಂಧಿತ ಜಾತಿಗಳನ್ನ ಬಿ ಗುಂಪಿಗೆ ಸೇರಿಸಿರುವ ಹಾಗೆ ರೋಸ್ಟರ್ ಬಿಂದುವಿನಡಿಯಲ್ಲಿ ಪ್ರವರ್ಗ ಎ ಗೆ ಎರಡನೇ ಸ್ಥಾನ ಹಾಗೂ ಪ್ರವರ್ಗ ಸಿ ಗೆ ಮೂರನೇ ಸ್ಥಾನವನ್ನ ಕೊಡ್ಬೇಕು ಇದರಿಂದ ಮೂರು ಜಾತಿಗಳಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ ಎಂದು ಒತ್ತಾಯಿಸಿದರು.
ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿ ವೇಳೆ ಏಕ ಉದ್ಯೋಗ ಅವಕಾಶವಿರುತ್ತದೆ ಇಂತಹ ಸಂಧರ್ಭದಲ್ಲಿ ಕೇವಲ ಒಂದೇ ಪ್ರವರ್ಗಕ್ಕೆ ಮೀಸಲಾಗಿಸದೆ ಮೂರು ವರ್ಗಕ್ಕೂ ಹಂಚಿಕೆ ಮಾಡಬೇಕು, ಹಿಂದಿನ ಪದ್ಧತಿಯಲ್ಲಿ ಒಂದು ಡಿಪಾರ್ಟಮೆಂಟ್ ಯೂನಿಟ್ ಎಂದು ಪರಿಗಣನೆಯಾಗ್ತಿತ್ತು ಆದರೆ ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯವನ್ನ ಒಂದು ಘಟಕವನ್ನಾಗಿ ಮಾರ್ಪಡಿಸಿ ಅಲ್ಲಿ ಲಭ್ಯವಿರುವಂತಹ ಪೋಸ್ಟಗಳನ್ನ ಮೂರು ವರ್ಗಗಳಿಗೂ ಸಮಾನವಾಗಿ ಹಂಚಿಕೆ ಮಾಡಬೇಕು ಮತ್ತು ಇಡೀ ಕರ್ನಾಟಕದ ವಿಶ್ವ ವಿದ್ಯಾಲನಿಲಯಗಳನ್ನ ಒಂದೇ ಘಟಕವನ್ನಾಗಿಸಿ ಅಲ್ಲಿರುವ ಹುದ್ದೆಗಳಿಗೆ ಸರ್ಕಾರವೇ ಏಕೀಕೃತ ನೇಮಕಾತಿ ವ್ಯವಸ್ಥೆಯನ್ನ ಸರ್ಕಾರ ಮಾಡಿದ್ದೆಯಾದಲ್ಲಿ ಮೂರು ವರ್ಗಗಳಿಗೂ ಸಮಾನ ನ್ಯಾಯ ಸಿಕ್ಕಂತಾಗುತ್ತದೆ ಎಂದು ಒತ್ತಾಯಿಸಿದರು.

