News Karnataka Kannada
Sunday, April 21 2024
Cricket
ಉತ್ತರ ಪ್ರದೇಶ

ಲಖಿಂಪುರ್ ಖೇರಿಯಲ್ಲಿ ರೈತನನ್ನು ಕೊಂದ ಮೊಸಳೆ

Crocodile kills farmer in UP
Photo Credit : IANS

ಉತ್ತರ ಪ್ರದೇಶ: ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಮೊಸಳೆಯೊಂದು 35 ವರ್ಷದ ರೈತನನ್ನು ಎಳೆದೊಯ್ದು ಕೊಂದಿದೆ.

ಮಂಗಳವಾರ ಈ ಘಟನೆ ನಡೆದಿದ್ದು, ಸಂತ್ರಸ್ತ ಸರ್ಜೀತ್ ಗೌತಮ್ ತನ್ನ ಹೊಲಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅವರು ತೊರೆಯ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ ಮೊಸಳೆ ಇದ್ದಕ್ಕಿದ್ದಂತೆ ಹೊರಬಂದು ಅವರನ್ನು ಆಳವಾದ ನೀರಿಗೆ ಎಳೆದುಕೊಂಡಿದೆ. ಈ ವೇಳೆ ನದಿಯನ್ನು ದಾಟುತ್ತಿದ್ದಇತರ ರೈತರು ಕಲ್ಲು ತೂರಾಟ ನಡೆಸಿ ಸರ್ಜೀತ್ ಅವರನ್ನು ರಕ್ಷಿಸಲು ಮುಂದಾಗಿದ್ದರೂ, ಅದು ಸಾಧ್ಯವಾಗಲಿಲ್ಲ.

ನಂತರ ಸರ್ಜೀತ್ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸರ್ಜೀತ್ ಪತ್ನಿ ಮತ್ತು ಆರು ಮಕ್ಕಳನ್ನು ಅಗಲಿದ್ದಾರೆ.

ಇನ್ನು ಎಸ್ಡಿಎಂ ಅನುರಾಗ್ ಸಿಂಗ್ ಅವರು ಕಂದಾಯ ತಂಡವನ್ನು ಗ್ರಾಮಕ್ಕೆ ಕಳುಹಿಸಿದ್ದು, ಸರ್ಜೀತ್ ಅವರ  ಕುಟುಂಬಕ್ಕೆ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ 4 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು