Bengaluru 24°C
Ad

ಸಿಂಗಾಪುರದಲ್ಲಿ ಕೋವಿಡ್‌-19 ಹೊಸ ಅಲೆ : ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಲರ್ಟ್‌

ಒಂದು ಬಾರಿ ತನ್ನ ರೌದ್ರವತಾರದಿಂದ ಜನತೆಯನ್ನು ಹಿಂಡಿ ಹಿಪ್ಪೆ ಮಾಡಿದ್ದ ಕೋವಿಡ್‌-19 ಇದೀಗ ಹೊಸ ಅಲೆ ಪತ್ತೆಯಾಗಿದ್ದು ಸಿಂಗಾಪುರದಲ್ಲಿ ಅಧಿಕ ಪ್ರಕರಣಗಳು ದಾಖಲಾಗಿರುವುದು ಕೊಂಚ ಗೊಂದಲಗೊಳಿಸಿದೆ.

ಬೆಂಗಳೂರು: ಒಂದು ಬಾರಿ ತನ್ನ ರೌದ್ರವತಾರದಿಂದ ಜನತೆಯನ್ನು ಹಿಂಡಿ ಹಿಪ್ಪೆ ಮಾಡಿದ್ದ ಕೋವಿಡ್‌-19 ಇದೀಗ ಹೊಸ ಅಲೆ ಪತ್ತೆಯಾಗಿದ್ದು ಸಿಂಗಾಪುರದಲ್ಲಿ ಅಧಿಕ ಪ್ರಕರಣಗಳು ದಾಖಲಾಗಿರುವುದು ಕೊಂಚ ಗೊಂದಲಗೊಳಿಸಿದೆ.

ಒಂದೇ ವಾರದಲ್ಲಿ ಕೊರೊನಾ ವೈರಸ್‌ ಕೇಸುಗಳ ಸಂಖ್ಯೆ ದ್ವಿಗುಣಗೊಂಡಿದ್ದು, ಮತ್ತೆ ಮಾಸ್ಕ್‌ ಧರಿಸಲು ಸಲಹೆ ನೀಡಲಾಗಿದೆ. ರಾಜ್ಯದಲ್ಲೂ ಆರೋಗ್ಯ ಇಲಾಖೆ ಅಲರ್ಟ್‌ ಆಗಿದ್ದು, ಪರಿಸ್ಥಿತಿಯನ್ನು ಗಮನಿಸುತ್ತಿದೆ.

ಸಿಂಗಾಪುರದಲ್ಲಿ ಒಂದೇ ವಾರದಲ್ಲಿ 25 ಸಾವಿರ ಕೋವಿಡ್ ಕೇಸ್ ಖಚಿತವಾಗಿದ್ದು, ಇದರಿಂದ ಸಿಲಿಕಾನ್ ಸಿಟಿ ಬೆಂಗಳೂರು ಅಲರ್ಟ್‌ ಆಗಿದೆ. ಇದರ ಜೊತೆಗೆ ಮಹಾರಾಷ್ಟ್ರದಲ್ಲಿಯೂ ಕೋವಿಡ್ ಒಮಿಕ್ರಾನ್ ರೂಪಾಂತರಿ ವೈರಸ್‌ನ 91 ಕೇಸ್‌ ಪತ್ತೆಯಾಗಿವೆ. ಹೀಗಾಗಿ, ಮುನ್ನೆಚ್ಚರಿಕೆ ವಹಿಸಲು ಇಂದು ಕೇಂದ್ರ ಆರೋಗ್ಯ ಇಲಾಖೆಯ ಜೊತೆಗೆ ರಾಜ್ಯ ಆರೋಗ್ಯ ಇಲಾಖೆ ಸಭೆ ನಡೆಯುತ್ತಿದೆ.

Ad
Ad
Nk Channel Final 21 09 2023
Ad