Bengaluru 25°C
Ad

ಭೀಕರ ಅಪಘಾತ : ಕಣಿವೆಗರ ಉರುಳಿ ಬಿದ್ದ ಗೂಡ್ಸ್‌ : 18 ಜನರ ದುರ್ಮರಣ

ಛತ್ತೀಸ್​ಗಢದ ಕಬೀರ್​ಧಾಮ್​ ಜಿಲ್ಲೆಯಲ್ಲಿ ಭೀಕರ ಅಪಘಾತ ನಡೆದಿದ್ದು ಕಣಿವೆಗೆ ಮಿನಿ ಗೂಡ್ಸ್‌ ಉರುಳಿಬಿದ್ದ ಪರಿಣಾಮ 18 ಮಂದಿ ಸಾವನಪ್ಪಿದ್ದಾರೆ.ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ಛತ್ತೀಸ್​ಗಢ : ಛತ್ತೀಸ್​ಗಢದ ಕಬೀರ್​ಧಾಮ್​ ಜಿಲ್ಲೆಯಲ್ಲಿ ಭೀಕರ ಅಪಘಾತ ನಡೆದಿದ್ದು ಕಣಿವೆಗೆ ಮಿನಿ ಗೂಡ್ಸ್‌ ಉರುಳಿಬಿದ್ದ ಪರಿಣಾಮ 18 ಮಂದಿ ಸಾವನಪ್ಪಿದ್ದಾರೆ.ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ಈ ಘಟನೆ ಸೋಮವಾರ ಜಜ್ದೂರು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬಹಪಾನಿ ಗ್ರಾಮದ ಬಳಿಯ ಬಂಜಾರಿ ಘಾಟ್​ ಬಳಿ ಮಿನಿ ಗೂಡ್ಸ್​ ಕಣಿವೆಗೆ ಉರುಳಿದೆ. ಮದ್ಯಾಹ್ನ 1.45ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ.

ಸರಕು ತುಂಬುವ ವಾಹನದಲ್ಲಿ ಜನರು ಸಂಚರಿಸುತ್ತಿದ್ದರು. ಹೀಗೆ ಸಂಚರಿಸುವ ವೇಳೆ ವಾಹನ ಸ್ಕಿಡ್​ ಆಗಿ ಕಣಿವೆಗೆ ಉರುಳಿ ಬಿದ್ದಿದೆ. ಈ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ರಕ್ಷಣಾ ತಂಡ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಜೊತೆಗೆ ಮೃತ ದೇಹವನ್ನು ಹೊರಗೆ ತೆಗೆದಿದ್ದಾರೆ.

Ad
Ad
Nk Channel Final 21 09 2023
Ad