Bengaluru 22°C
Ad

ಡಾ.ಎಸ್‌ಪಿಬಿ ಜನ್ಮದಿನದ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ

ಡಾ.ಎಸ್‌ಪಿಬಿ ಅವರ ಜನ್ಮದಿನದ ಅಂಗವಾಗಿ  ಡಾ.ಎಸ್‌ಪಿಬಿ  ಎಸೊಶೇಶನ್ ನ ತುರ್ತು ಸಭೆಯನ್ನು ಉರ್ವಾ ದಲ್ಲಿರುವ ಶನ ಕಚೇರಿಯಲ್ಲಿ ಸಂಜೆ 7.00 ಗಂಟೆಗೆ ನಡೆಸಲಾಯಿತು.

ಮಂಗಳೂರು: ಡಾ.ಎಸ್‌ಪಿಬಿ ಅವರ ಜನ್ಮದಿನದ ಅಂಗವಾಗಿ  ಡಾ.ಎಸ್‌ಪಿಬಿ  ಎಸೊಶೇಶನ್ ನ ತುರ್ತು ಸಭೆಯನ್ನು ಉರ್ವಾ ದಲ್ಲಿರುವ ಶನ ಕಚೇರಿಯಲ್ಲಿ ಸಂಜೆ 7.00 ಗಂಟೆಗೆ ನಡೆಸಲಾಯಿತು.

ಈ ಸಭೆಯಲ್ಲಿ ಸಂಗೀತ ಲೋಕದ ಸಾರ್ವಭೌಮ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ರವರ 78ನೇ ಜನ್ಮದಿನದ ಅಂಗವಾಗಿ ನಡೆಯುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕ್ಯಾಟರಿಂಗ್ ಎಸೊಶೇಶನ್ ಅಧ್ಯಕ್ಷರು ಶ್ರೀ ದೀಪಕ್ ಅಮೀನ್  ಮತ್ತು ಡಾ.ಎಸ್‌ಪಿಬಿ ಎಸೊಶೇಶನ್ ನ ಅಧ್ಯಕ್ಷರು ಶ್ರೀ ಮೋಹನ್ ಪ್ರಸಾದ್, ಗೌರವಾಧ್ಯಕ್ಷ ರಾದ ಶ್ರೀ ಹರೀಶ್ ರಂಗೋಲಿ ಇವರು ಬಿಡುಗಡೆ ಮಾಡಿದರು.

ಆಮಂತ್ರಣ  ಪತ್ರಿಕೆ  ಬಿಡುಗಡೆ ನಂತರ ಪೂರ್ವಬಾವಿ ತಯಾರಿಯ ಬಗ್ಗೆ ಚರ್ಚೆ ನಡೆಸಲಾಯಿತು. ಕಾರ್ಯಕಾರಿ ಸಮಿತಿಯ ಸ್ಥಾಪಧ್ಯಾಕ್ಷರು ಶ್ರೀ ಸಂತೋಷ್ ಕುಮಾರ್ ಅಂಚನ್,ಉಪಾಧ್ಯಕ್ಷ ರು ಶ್ರೀಮತಿ ಸರೋಜಾರಾವ್.ಪ್ರಧಾನ ಕಾರ್ಯದರ್ಶಿ ಶ್ರೀ ವೆಂಕಟೇಶ್ ಜೆಪ್ಪು ,ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರೆಲ್ಲರೂ ಸಭೆಯಲ್ಲಿ ಉಪಸ್ಥಿತರಿದ್ದರು.

 

Ad
Ad
Nk Channel Final 21 09 2023
Ad