Bengaluru 24°C
Ad

ಬಿರುಗಾಳಿ ಹೊಡೆತಕ್ಕೆ ತತ್ತರಿಸಿ ಹೋದ ಸಿಂಗಾಪುರ್ ವಿಮಾನ

ಲಂಡನ್‌ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನ ಬಿರುಗಾಳಿಯ ಹೊಡೆತಕ್ಕೆ ಅಲುಗಾಡಿ ಭಾರೀ ಅನಾಹುತ ಸೃಷ್ಟಿಸಿದ ಘಟನೆ ನಡೆದಿದೆ.

ಬ್ಯಾಂಕಾಕ್: ಲಂಡನ್‌ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನ ಬಿರುಗಾಳಿಯ ಹೊಡೆತಕ್ಕೆ ಅಲುಗಾಡಿ ಭಾರೀ ಅನಾಹುತ ಸೃಷ್ಟಿಸಿದ ಘಟನೆ ನಡೆದಿದೆ.

ಭಯಾನಕ ಘಟನೆಯಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಸಿಂಗಾಪುರಕ್ಕೆ ಹೊರಟಿದ್ದ SQ321 ವಿಮಾನವು ಮಾರ್ಗ ಮಧ್ಯದಲ್ಲಿ ತೀವ್ರವಾಗಿ ಬೀಸಿದ ಗಾಳಿಯಿಂದ ತತ್ತರಿಸಿ ಹೋಗಿದೆ.

ಮಧ್ಯಾಹ್ನ 3.45ಕ್ಕೆ (ಸ್ಥಳೀಯ ಕಾಲಮಾನ) ಬ್ಯಾಂಕಾಕ್​​ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಇನ್ನು ಈ ವಿಮಾನದಲ್ಲಿ ಒಟ್ಟು 211 ಮಂದಿ ಪ್ರಯಾಣಿಕರು ಹಾಗೂ 18 ಮಂದಿ ಸಿಬ್ಬಂದಿ ಇದ್ದರು ಎಂದು ತಿಳಿದು ಬಂದಿದೆ.

ಇನ್ನು ವಿಮಾನ ಟ್ರ್ಯಾಕಿಂಗ್ ಡೇಟಾವನ್ನು ವಿಶ್ಲೇಷಿಸಿದಾಗ ಸಿಂಗಾಪುರ್ ಏರ್‌ಲೈನ್ಸ್ ವಿಮಾನವು 37,000 ಅಡಿ (11,300 ಮೀಟರ್) ಎತ್ತರದಲ್ಲಿ ಪ್ರಯಾಣಿಸುವುದನ್ನು ತೋರಿಸಿದೆ. ನಂತರ, ಬೋಯಿಂಗ್ 777 ದಿಢೀರನೇ 5 ನಿಮಿಷಗಳ ಅವಧಿಯಲ್ಲಿ 6 ಸಾವಿರ ಅಡಿ ವಿಮಾನ ಕೆಳಗೆ ಬಂದಿದೆ.

ವಿಮಾನ ತುರ್ತು ಭೂಸ್ಪರ್ಶ ಮಾಡಿದ ಕೂಡಲೇ ಗಂಭೀರವಾಗಿ ಗಾಯಗೊಂಡವರನ್ನು ಸಮಿತಿವೇಜ್ ಶ್ರೀನಕರಿನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ ಗಂಭೀರವಾಗಿ ಗಾಯಗೊಂಡವರಿಗೆ ನಾವು ಅಗತ್ಯ ವೈದ್ಯಕೀಯ ನೆರವು ಒದಗಿಸಲು ಥೈಲ್ಯಾಂಡ್‌ನ ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ.

ಈ ಘಟನೆಯಲ್ಲಿ ಈಗಾಗಲೇ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು, ಅಗತ್ಯವಿರುವ ಯಾವುದೇ ಹೆಚ್ಚುವರಿ ಸಹಾಯವನ್ನು ಒದಗಿಸಲು ಬ್ಯಾಂಕಾಕ್‌ಗೆ ತಂಡವನ್ನು ಕಳುಹಿಸುತ್ತಿದ್ದೇವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

 

Ad
Ad
Nk Channel Final 21 09 2023
Ad