ತಿ.ನರಸೀಪುರ: ಬನ್ನೂರು ಹೋಬಳಿಯ ಚಾಮುನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳ ಸ್ಥಾನದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಸಲಾಯಿತು. ಚಾಮನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರದ ಸಂಘದ ಕಚೇರಿಯಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆದಿದೆ.
ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ ಒಳಗೊಂಡ ಬಣದಿಂದ ಸ್ಪರ್ಧಿಸಿದ್ದ 12 ಮಂದಿ ಸದಸ್ಯರು ಗೆಲುವು ಸಾಧಿಸಿದರು, ಚಾಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರುಗಳ ಸ್ಥಾನಕ್ಕೆ 19.02.2025 ರಂದು ಚುನಾವಣೆ ನಡೆಸಲಾಗಿತ್ತು.
ಚುನಾವಣೆ ಫಲಿತಾಂಶ ಪ್ರಕಟಣೆಯನ್ನು ನ್ಯಾಯಾಲಯದ ಆದೇಶದ ಮೇರೆಗೆ ತಡೆ ಹಿಡಿಯಲಾಗಿತ್ತು. ಇಂದು ನ್ಯಾಯಾಲಯದ ತಡೆಯಜ್ಞೆ ತೆರವಾಗಿ ಮತ ಎಣಿಕೆ ಕಾರ್ಯ ಮಾಡಲಾಯಿತು. 12 ನಿರ್ದೇಶಕರುಗಳ ಸ್ಥಾನದ ಮತ ಎಣಿಕೆ ಕಾರ್ಯ ನಡೆಸಲಾಯಿತು. ಅಂತಿಮವಾಗಿ ಮಾಜಿ ಶಾಸಕಿ ಸುನಿತಾ ವಿರಪ್ಪ ಗೌಡ ತಂಡದ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಸಹಕಾರ ಸಂಘದ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದು ಕೊಳ್ಳುವಲ್ಲಿ ಯಶಸ್ವಿಯಾಯಿತು.
ಸಾಲಗಾರರ ಕ್ಷೇತ್ರದಿಂದ ನಿರ್ದೇಶಕ ಸ್ಥಾನ ಆಯ್ಕೆ ಬಯಸಿ ತಮ್ಮ ತಂಡದೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಬಿ ದೇವರಾಜು (921), ಎಂಎಸ್ ಜಯರಾಮೇಗೌಡ (880), ಉಮೇಶ್ (864), ಮಾದೇಗೌಡ (751), ವಿ. ಶಂಕರೇಗೌಡ (742), ಎಂ ಸತೀಶ್ (788),ಜೆ ಸುನಿತಾ ವೀರಪ್ಪಗೌಡ (715), ಸಿ ಪಿ ವಿದ್ಯಾ (677), ಗೋಪಾಲ (722), ಚೆನ್ನಮಲ್ಲು (780), ಲಕ್ಷ್ಮಮ್ಮ (700)ಸಾಲಗಾರರಲ್ಲದ ಕ್ಷೇತ್ರದಿಂದ ಸಿಎಸ್ ಮಂಜುನಾಥ್ 305 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಸಿ. ರಘು ಘೋಷಣೆ ಮಾಡಿದರು.

