ನಂಜನಗೂಡು: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ದಲಿತರಿಗೆ ಶವಸಂಸ್ಕಾರ ಮಾಡಲು ಸ್ಮಶಾನವಿಲ್ಲದೆ ದಲಿತರು ಪರದಾಡುತ್ತಿದ್ದಾರೆ ಕೂಡಲೇ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಸ್ಮಶಾನ ಭೂಮಿಯನ್ನು ನೀಡಬೇಕು ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಎದುರಿಸಿ ಎಂದು ದಲಿತ ಸಂಘರ್ಷ ಸಮಿತಿ ಸಂಯೋಜಕ ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ ಎಚ್ಚರಿಕೆ ನೀಡಿದ್ದಾರೆ.
ನಂಜನಗೂಡು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನಂಜನಗೂಡು ತಾಲ್ಲೂಕು ಸಂಯೋಜಕರಾಗಿ ಶಿವರಾಜು ಗಟ್ಟವಾಡಿಪುರ, ಜಿಲ್ಲಾ ಸಮಿತಿ ಸದಸ್ಯರಾಗಿ ಕಳಲೆ ಕುಮಾರ್, ಸಂಘಟನಾ ಸಂಯೋಜಕರಾಗಿ ಬಿಳಿಗೆರೆ ಸೋಮಣ್ಣ, ಮಲ್ಕುಂಡಿ ಪುಟ್ಟಬುದ್ಧಿ, ಸಿದ್ದರಾಜು, ಖಜಾಂಚಿಯಾಗಿ ರವಿ ಕೆರೆಹುಂಡಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೃಷ್ಣ, ಚಿಕ್ಕಣ್ಣ, ರಾಜಶೇಖರ್, ಜ್ಯೋತಿ ಪ್ರಕಾಶ್, ಪ್ರಸಾದ್, ಗಜೇಂದ್ರ ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಸದಸ್ಯರಾದ ಕಂದೇಗಾಲ ಶಿವಣ್ಣ, ದಸಂಸ ಮುಖಂಡ ಮರಿಸ್ವಾಮಿ, ಚಿಕ್ಕಮಲ್ಲಯ್ಯ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.

