ಮೈಸೂರು: ಕೊಡಗು ಮೂಲದ ಕ್ಯಾಪ್ಟನ್ ಮಾಲೇಟಿರ ನಿತಿನ್ ಕಾರ್ಯಪ್ಪ ಭಾರತೀಯ ನೌಕಾಪಡೆಯ ಕಮಾಡಿಂಗ್ ಆಫೀಸರ್ ಆಗಿ ಕೊಲ್ಕತ್ತಾದ ಐಎನ್ಎಸ್ ನಲ್ಲಿ ನೇಮಕಗೊಂಡಿದ್ದಾರೆ.

ಮೈಸೂರಿನ ಬೋಗಾದಿಯಲ್ಲಿ ನೆಲೆಸಿರುವ ಮಾಲೇಟಿರ ಗಣೇಶ್ ಬೋಪಣ್ಣ ಹಾಗೂ ದಿವಂಗತ ಕಾವೇರಿ ಬೋಪಣ್ಣ ರವರ ಪುತ್ರರಾಗಿರುವ ಕ್ಯಾಪ್ಟನ್ ನಿತಿನ್ ಕಾರ್ಯಪ್ಪ, ಸೇಂಟ್ ಜೋಸೆಫ್ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು ನಂತರ ರಾಷ್ಟ್ರೀಯ ಭಾರತೀಯ ಸೇನಾ ಕಾಲೇಜ್ ಡೆಹರಾಡೂನ್ ನಲ್ಲಿ ತರಬೇತಿ ಹೊಂದಿ ಡಿಫೆನ್ಸ್ ಅಕಾಡೆಮಿಗೆ ಸೇರ್ಪಡೆಗೊಂಡರು.

ಈ ಹಿಂದೆ ಐಎನ್ಎಸ್ ಅಜಯ್, ಐಎನ್ಎಸ್ ಕಡ್ಮಟ್ ನಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು. ಇಸ್ಲಾಂಮಬಾದ್ ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಸಲಹೆಗಾರರಾಗಿ ಕೂಡ ಸೇವೆ ಸಲ್ಲಿಸಿದ್ದರು.

ಇವರ ಪತ್ನಿ ರಾಷ್ಟ್ರೀಯ ಓಟಗಾರ್ತಿ ರೋಹಿಣಿ ಇತ್ತೀಚೆಗೆ ನಡೆದ ಟಾಟಾ ಮುಂಬೈ ಮೆರಥಾನ್ ನಲ್ಲಿ ಭಾಗವಹಿಸಿ ಪೂರ್ಣವಾಗಿ ಅಂತಿಮಗೊಳಿಸಿದ್ದರು. ಇವರ ಕಿರಿಯ ಸಹೋದರ ನಯನ್ ಚಂಗಪ್ಪ ಮುಖ್ಯ ಮೆರಾಯಿನ್ ಇಂಜಿನಿಯರ್ ಆಗಿ ನ್ಯೂಜಿಲ್ಯಾಂಡಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.