ಮೈಸೂರು: ಡಿಸಿಎಂ ನಟ್ಟು ಬೋಲ್ಟ್ ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಸಿಎಂ ತಾಲಿಬಾನ್ ಸರಕಾರ ನಡೆಸುತ್ತಿದ್ದಾರೆ. ಡಿಸಿಎಂ ಗೂಂಡಗಿರಿ ಸರಕಾರ ನಡೆಸುತ್ತಿದ್ದಾರೆ.
ಡಿ.ಕೆ. ಶಿವಕುಮಾರ್ ಅವರೇ ಕರ್ನಾಟಕ ಏನೂ ನಿಮ್ಮ ರಿಯಲ್ ಎಸ್ಟೇಟ್ ಆಫೀಸಾ.?, ಮೇಕೆದಾಟು ಪಾದಯಾತ್ರೆ ಅದು ಕಾಂಗ್ರೆಸ್ ಜಾತ್ರೆ, ರಾಜಕೀಯಕ್ಕೆ ನೀವು ನಡೆಸಿದ ಯಾತ್ರೆ. ಕಾಂಗ್ರೆಸ್ ಜಾತ್ರೆಗೆ ಬರಲು, ಕಾಂಗ್ರೆಸ್ ನಾಯಕರ ಫೋಟೋ ಇರುವ ಯಾತ್ರೆಯಲ್ಲಿ ಭಾಗವಹಿಸಲು ಸುದೀಪ್, ಶಿವಣ್ಣ, ಯಶ್ ಏನೂ ನಿಮ್ಮ ಪಾರ್ಟಿ ಕಾರ್ಡ್ ಓಲ್ಡರ್ ಗಳಾ?, ನೀವು ಹೊರಟ ಮಾಡೋದಿದ್ರೆ ತಮಿಳುನಾಡು ಸರ್ಕಾರದ ವಿರುದ್ಧ ಹೋರಾಟ ಮಾಡಿ ಎಂದರು.
ಸ್ಟಾಲಿನ್ ಒಪ್ಪಿಗೆ ಪಡೆದು ಬನ್ನಿ ನೋಡೋಣ, ಆಗ ನಾನು ನಿಮ್ಮ ಹೋರಾಟಕ್ಕೆ ಬರ್ತಿನಿ. ಕಾಂಗ್ರೆಸ್ ಬಾವುಟ ಇಲ್ಲದೆ ಯಾತ್ರೆ ಮಾಡಿ ನಾವೆಲ್ಲರೂ ಬರ್ತಿವಿ. ಡಿಕೆಶಿ ಅವರೇ ನಟ್ಟು ಬೋಲ್ಟ್ ನಿಮ್ಮ ಬ್ರದರ್ಸ್ ಮಾತಾಡುವ ಭಾಷೆ. ಅದೇ ಭಾಷೆ ನೀವು ಪ್ರಯೋಗ ಮಾಡಿದಿರಿ. ಡಿಕೆಶಿ ಅವರೇ ಹುಲಿ ಏರಿದ್ದೀರಿ, ಜನ ಮರ್ಯಾದೆ ಕೊಡುತ್ತಿರುವುದು ಹುಲಿಗೆ ಹೊರತು ನಿಮಗಲ್ಲ. ದರ್ಪ ಬಿಡಿ ಅಧಿಕಾರ ಇರುವಾಗ ಮಾತ್ರ ನಿಮಗೆ ಬೆಲೆ ಎಂದರು.
ಹುಲಿ ಇಳಿದ ಮೇಲೆ ಅದೇ ಹುಲಿಯೆ ನಿಮ್ಮನ್ನು ತಿಂದು ಬಿಡುತ್ತದೆ ಎಚ್ಚರ ಇರಲಿ. ಕನ್ನಡ ಸಿನಿಮಾ ನಟರ ಬಗ್ಗೆ ಹಗುರವಾಗಿ ಮಾತಾಡಬೇಡಿ. ರಾಜ್ಯಕ್ಕೆ ನಟರು ದೊಡ್ಡ ಕೊಡುಗೆ ಕೊಟ್ಟಿದ್ದಾರೆ.
ಯಶ್, ಶಿವಣ್ಣ, ಡಾಲಿ ಎಲ್ಲರೂ ಬೇರೆ ಕಡೆ ಹೋಗಿಯೂ ಕನ್ನಡದ ಹಿರಿಮೆ ಹೆಚ್ಚಿಸಿದ್ದಾರೆ. ಶಾಶ್ವತವಾಗಿ ನೀವೆನೂ ಅಧಿಕಾರದಲ್ಲಿ ಇರ್ತಿರಾ? ಎಂದು ನಟ್ಟು ಬೋಲ್ಟ್ ವಿಚಾರ ಡಿಸಿಎಂ ಡಿಕೆಶಿ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

