ತಿ. ನರಸೀಪುರ: ನಿಯಮಭಾರವಾಗಿ ವೈದ್ಯರ ಕಾರ್ಯನಿರ್ವಹಣೆ ಮತ್ತು ಸರ್ಕಾರಿ ಸಾರ್ವಜನಿಕರ ವೈದ್ಯರ ಕರ್ತವ್ಯ ಲೋಪ ಖಂಡಿಸಿ ದಸಂಸ ಸಂಚಾಲಕ ಕುಕ್ಕೂರು ರಾಜರ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು.

ಸುದ್ದಿಗೋಷ್ಠಿ ಕುರಿತು ಮಾತನಾಡಿದ ಅವರು ಬೆಳಿಗ್ಗೆ 8:30ರಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಹೋಗಿದ್ದಾಗ ತುರ್ತು ಚಿಕಿತ್ಸೆ ವಿಭಾಗದಲ್ಲಿ ಪ್ರಸ್ತುತ ಕಯ್ಯಂಬಳ್ಳಿ ಪ್ರಾಥಮಿಕ ಆರೋಗ್ಯ ಚಿಕಿತ್ಸೆ ಕೇಂದ್ರದ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ ನಾರಾಯಣ್ ಪಟ್ಟಣದ ತರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆ ಮಾಡುತ್ತಿರುವುದು ಕಂಡುಬಂತು.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಭಾಗಕ್ಕೆ ಬರುವ ಅಧಿಕಾರ ಮತ್ತು ಹಣವಂತ ಗರ್ಭಿಣಿಯರಿಗೆ ಉತ್ತಮ ಚಿಕಿತ್ಸೆ. ಬಡವರಿಗೆ ಇಲ್ಲಸಲ್ಲದ ನೆಪ ಹೇಳಿ ಮೈಸೂರು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.

ಈ ಆಸ್ಪತ್ರೆಯ ಕರ್ತವ್ಯನೀರಿತ ವೈದ್ಯರ ನೀವು ಎಂದು ರಾಜನಾರಾಯಣ್ ರವರನ್ನು ಎಂದು ಕೇಳಿದಾಗ ಇಲ್ಲ ಈ ದಿನದ ಕರ್ತವ್ಯ ನಿರಿತ ವೈದ್ಯರು ಅರವಳಿಕೆ ತಜ್ಞ ನೀಲವೇಣಿ ಅವರು ಎಂದರು.

ಈ ವಿಷಯವನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾಕ್ಟರ್ ಅಭಿಲಾಶ್ ರವರನ್ನು ವಿಚಾರಿಸಿದಾಗ ಬೇರೊಂದು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ನಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಸರಿಯಲ್ಲ. ಈ ರೀತಿ ಮಾಡುವಂತಿಲ್ಲ. ನನ್ನ ಗಮನಕ್ಕೆ ತರದೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಗಳ ವಿಚಾರವಾಗಿ ಜಿಲ್ಲಾ ವೈದ್ಯಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.

ಈ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು. ಸುದ್ದಿ ಗೋಷ್ಠಿಯಲ್ಲಿ ದಸಂಸದ ನಾಗರಾಜಮೂರ್ತಿ, ಉಮೇಶ್, ಭರತ್, ಬಸವರಾಜು, ಪ್ರಜ್ವಲ್, ಇದ್ದರು.