ನಂದಿಗುಂದ: ನ್ಯಾಯಬೆಲೆ ಅಂಗಡಿಯಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಕೊಡಬೇಕಾಗಿದ್ದ ಅಕ್ಕಿಯಲ್ಲಿ ಮೋಸ ಆಗುತ್ತಿರುವುದನ್ನು ಗಮನಿಸಿದ ಬಿಪಿಎಲ್ ಪಡಿತದಾರರು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರ ಗಮನಕ್ಕೆ ಫೋನ್ನಲ್ಲಿ ತಿಳಿಸಲಾಯಿತು.
ಇದೇ ಸಮಯಕ್ಕೆ ಅಧ್ಯಕ್ಷರು ನ್ಯಾಯ ಬೆಲೆ ಅಂಗಡಿಗೆ ಖುದ್ದಾಗಿ ಹೋಗಿ ಸೋಮವಾರಪೇಟೆ ಆಹಾರ ನಿರೀಕ್ಷಕರ ಫೋನ್ನಲ್ಲಿ ಮಾತನಾಡಿಸಿ ನ್ಯಾಯಬೆಲೆ ಅಂಗಡಿಯವರಿಗೆ ಬಿಪಿಎಲ್ ಪಡಿತರವರಿಗೆ ಒಬ್ಬ ಸದಸ್ಯರಿಗೆ 15 ಕೆಜಿ ಅಕ್ಕಿ ಕೊಡುವಂತೆ ಆದೇಶಿಸಲಾಯಿತು.
ಪಡಿತದಾರರಿಗೆ ಯಾವ ನ್ಯಾಯಬೆಲೆ ಅಂಗಡಿಯಲ್ಲಿ ಮೋಸ ಮಾಡುತ್ತಿದ್ದರು ಅಂತಹ ನ್ಯಾಯಬೆಲೆ ಅಂಗಡಿ ಅವರ ಲೈಸೆನ್ಸ್ ತೆಗೆದುಹಾಕುವಂತೆ ಹಾಗೂ ಇವರ ನ್ಯಾಯಬೆಲೆ ಅಂಗಡಿಯ ಅಕ್ಕಿ ತೂಕ ಹಾಕು ಸ್ಕೇಲ್ ಸಹಸರಿರುವುದಿಲ್ಲ, ಅಕ್ಕಿ ಸಹ ಕಡಿಮೆ ಬರುತ್ತದೆ, ಇರುವುದಿಲ್ಲ ಹಾಗಾಗಿ ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸೋಮವಾರಪೇಟೆ ತಾಲ್ಲೂಕು ಮಾನ್ಯ ತಹಸಿಲ್ದಾರ್ ಅವರಿಗೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಮಾನ್ಯ ಆಹಾರ ನಿರೀಕ್ಷಕರು ಸೋಮವಾರಪೇಟೆ ಹಾಗೂ ಜಿಲ್ಲಾ ಆಹಾರ ನಿರೀಕ್ಷಕರಿಗೆ ಕರವೇ ಮನವಿ ಮಾಡಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರ ಸಂತೆ ಹೋಬಳಿಗೆ ಸೇರಿದ ನಂದಿಗುಂದ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರದಿಂದ ಆದೇಶಿಸಿ ಕಳೆದ ತಿಂಗಳ ಐದು ಕೆಜಿ ಅಕ್ಕಿ ಹಾಗೂ ಈ ತಿಂಗಳ 10 ಕೆಜಿ ಅಕ್ಕಿಯನ್ನು ಸೇರಿ ಒಟ್ಟು 15 ಕೆಜಿ ಅಕ್ಕಿ ಒಬ್ಬ ಸದಸ್ಯರಿಗೆ ಸೇರಿದಂತೆ ಕೊಡಬೇಕಾಗಿದೆ.

ಆದರೆ ಈ ನಂದಿಗುಂದ ನ್ಯಾಯಬೆಲೆ ಅಂಗಡಿಯಲ್ಲಿ ಒಬ್ಬ ಸದಸ್ಯರಿಗೆ 5 ಕೆಜಿ ಹಾಗೆ ಕೊಟ್ಟು ಬಿಪಿಎಲ್ ಪಡಿತದಾರರನ್ನು ಸಾಗು ಹಾಕುತ್ತಿದ್ದ ಸಮಯದಲ್ಲಿ ಬಿಪಿಎಲ್ ಕಾರ್ಡ್ ಪಡಿತದಾರರು ಕರ್ನಾಟಕ ರಕ್ಷಣಾ ವೇದಿಕೆ ನಂದಿಗುಂದ ನ್ಯಾಯಬೆಲೆ ಅಂಗಡಿಯಲ್ಲಿ ನಮಗೆ ಮೋಸ ಮಾಡುತ್ತಿದ್ದಾರೆ, ಸರಿಪಡಿಸಿ ಎಂದು ತಿಳಿಸಿದರು.
ಕರವೇ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರು ನಂದಿಗುಂದ ನ್ಯಾಯಬೆಲೆ ಅಂಗಡಿಗೆ ಹೋಗಿ ಅವರನ್ನು ಕೇಳಿದರೆ ನಮಗೆ ಸರ್ಕಾರ ಹೇಳುವುದು ಸದಸ್ಯರಿಗೆ ಐದೇ ಕೆಜಿ ಅಕ್ಕಿ ಕೊಡಲು ಹೇಳಿದರೆ ಎಂದು ತಿಳಿಸಿದರು. ಅದೇ ಸಮಯದಲ್ಲಿ ಕರವೇ ಅಧ್ಯಕ್ಷರು ಸೋಮವಾರಪೇಟೆ ಆಹಾರ ನಿರೀಕ್ಷಕರದ ಯಶಸ್ವಿನಿ ಮೇಡಂ ರವರಲ್ಲಿ ಸಂಪರ್ಕಿಸಿ. ನಂದಿಗುಂದ ನ್ಯಾಯ ಬೆಲೆ ಅಂಗಡಿಯವರಿಗೆ ಯಾಕೆ ನೀವು ಜನರಿಗೆ ಮೋಸ ಮಾಡುತ್ತಿದ್ದೀರಾ,
ನಾವು ನಿಮಗೆ 15 ದಿನದ ಮುಂಚೇನೆ 15 ಕೆಜಿ ಅಕ್ಕಿ ಕೊಡಲು ತಿಳಿಸಿದ್ದೇವೆ ಆದರೆ ನೀವು ಯಾಕೆ ಕೊಡುತ್ತಿಲ್ಲ ಯಾಕೆ ಜನರಿಗೆ ಮೋಸ ಮಾಡುತ್ತಿದ್ದರೆ ಎಂದು ಹೇಳಿದರು. ಅಲ್ಲೇ ಬೆಲೆ ಇರುವ ಜನರಿಗೆ 15 ಕೆಜಿ ಕೊಡಬೇಕೆಂದು ಆಹಾರ ನಿರೀಕ್ಷಕರಾದ ಯಶಸ್ವಿನಿ ಮೇಡಂ ಆದೇಶಿಸಿದರು. ಆಗಾಗಲೇ ಐದು ಕೆಜಿ ಹಾಗೆ 100 ಪಡಿತರ ಚೀಟಿಗಳಿಗೆ 5 ಕೆ.ಜಿ ಹಾಗೆ ಅಕ್ಕಿ ಕೊಡಲಾಗಿತ್ತು ಅವರುಗಳಿಗೂ ಪುನಃ ಕರೆದು 10 ಕೆಜಿ ಹಾಗೆ ಒಂದು ಸದಸ್ಯರಿಗೆ ಕೊಡಬೇಕೆಂದು ಆದೇಶಿಸಿದರು.

ಹಾಗೂ ಈ ನ್ಯಾಯಬೆಲೆ ಅಂಗಡಿಯ ಅಕ್ಕಿ ತೂಕ ಹಾಕುವ ಸ್ಕೇಲ್ ಸಹ ಸರಿರುವುದಿಲ್ಲ, ಇರುವುದಿಲ್ಲ ಅಕ್ಕಿಯಲ್ಲಿ ಸಹ ತೂಕ ಹೊಡೆಯುತ್ತಿದ್ದಾರೆ, ಇಂಥವರ ಮೇಲೆ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ. ಈ ಸಮಯದಲ್ಲಿ ನಮಗೆ ಸಹಕರಿಸಿದ ಯಶಸ್ವಿನಿ ಮೇಡಂ ಅವರಿಗೆ ಹೃದಯಪೂರ್ವಕ ಧನ್ಯವಾದಗಳು ಹಾಗೂ ನಂದಿಗುಂದ ನ್ಯಾಯ ಬೆಲೆ ಅಂಗಡಿ ಅವರು ಮೋಸ ಮಾಡುತ್ತಿರುವ ಅಂಗಡಿಯವರಿಗೆ ಮಾನ್ಯ ತಾಸಿಲ್ದಾರ್ ಅವರು ಮಾನ್ಯ ಆಹಾರ ನಿರೀಕ್ಷಕ ಮಾನ್ಯ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕರವೇ ಮಾಡಿಕೊಳ್ಳುತ್ತಿದ್ದೇವೆ.
ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯವರು ಮೋಸ ಆಗುತ್ತಿರುವ ಅಕ್ಕಿಯ ಬಗ್ಗೆ ಕೇಳಲು ಹೋದರೆ ಬೇರೆ ಜನರ ಹತ್ತಿರ ಫೋನ್ನಲ್ಲಿ ನಮಗೆ ಧಮ್ಕಿ ಹಾಕಿಸುತ್ತಾರೆ. ಹೇಗೆ ಬೆಳೆದಿದ್ದರೆ ನೋಡಿ ಅಂಗಡಿಯವರು ಇಂಥಹ ನ್ಯಾಯಬೆಲೆ ಅಂಗಡಿಯವರ ಮೇಲೆ ಬೇಗನೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.

