ಮೈಸೂರು: ಐಜಿಡಿ, ಸ್ಮಾರ್ಟ್ ಇಂಡಿಯಾ ಐಟಿಸಿ ಕೋಟೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟೆ ಇವರ ಸಹಯೋಗದಲ್ಲಿ ಇಂದು ಪೋಷಣ್ ಮೇಳ ಮತ್ತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಇಂದು ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸ್ಪರ್ಧೆಗಳನ್ನು ಆಡಿಸಿ ಭಾಗವಹಿಸಿದ ಮಕ್ಕಳಿಗೆ ಬಹುಮಾನವಾಗಿ ಹಣ್ಣುಗಳು ಮತ್ತು ಪೌಷ್ಟಿಕಾಹಾರ ಪದಾರ್ಥಗಳನ್ನು ನೀಡಿದ್ದು ವಿಶೇಷವಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಕ್ಕಳನ್ನು ಕುರಿತು ತಾಲೋಕು ಸಂಯೋಜಕ ಉಮೇಶ್ ಬಡಗಲಪುರ ಮಾತಾನಾಡಿ ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ಸುತ್ತಮುತ್ತಲಿನ ಪೌಷ್ಟಿಕ ಆಹಾರ ಪದಾರ್ಥಗಳನ್ನು ಬಿಟ್ಟು ಜಂಗ್ ಪುಡ್ ನತ್ತಾ ಮನಸ್ಸು ಮಾಡುತ್ತಿದ್ದೆವೆ. ನಾವು ತಿನ್ನುವ ಗೋಬಿ, ಪಾನಿಪುರಿ ಮಸಾಲಪುರಿ, ಪಿಜ್ಜಾ, ಬರ್ಗರ್, ಗಳಂತ ಆಧುನಿಕ ಆಹಾರ ಪದಾರ್ಥಗಳು ನಮ್ಮ ಆರೋಗ್ಯವನ್ನ ಸಂಪೂರ್ಣ ಹಾಳುಮಾಡುತ್ತಿವೆ.

ಆದ್ದರಿಂದ ನಮ್ಮಲ್ಲೆ ಸ್ಥಳೀಯವಾಗಿ ಸಿಗುವ ಸೊಪ್ಪು, ತರಕಾರಿ, ಹಣ್ಣುಗಳನ್ನು ತಿನ್ನುವ ಮೂಲಕ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದು ಹೇಳಿದರು. ಇದೇ ಸಮಯದಲ್ಲಿ ಮಕ್ಕಳಿಗೆ ಆರೋಗ್ಯಕ್ಕೆ ಸಂಬಂಧಿಸಿದ ಆಟಗಳು, ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಾಲೇಜು ಮಕ್ಕಳು, ಉಪನ್ಯಾಸಕರು, ಆಡಳಿತ ವರ್ಗ, ಸಿಬ್ಬಂದಿ, ಸಂಸ್ಥೆಯ ಮುಖಂಡರು ಭಾಗವಹಿಸಿದ್ದರು.