News Karnataka Kannada
Saturday, April 20 2024
Cricket
ಕಲಬುರಗಿ

ರಾಮ, ಆಂಜನೇಯ, ಸಿಎಂ ಯೋಗಿ ಭಾವಚಿತ್ರಗಳಿಗೆ ಸಗಣಿ ಹಚ್ಚಿದ ಕಿಡಿಗೇಡಿಗಳು

Miscreants smear cow dung on portraits of Lord Ram, Anjaneya, CM Yogi
Photo Credit : News Kannada

ಕಲಬುರಗಿ: ಯಡ್ರಾಮಿ ತಾಲ್ಲೂಕಿನ ಆಂದೋಲಾ ಗ್ರಾಮದಲ್ಲಿ ಅಳವಡಿಸಿದ್ದ ಫ್ಲೆಕ್ಸ್‌ನಲ್ಲಿದ್ದ ಶ್ರೀರಾಮ, ಆಂಜನೇಯ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಇತರರ ಭಾವಚಿತ್ರಗಳಿಗೆ ಮಂಗಳವಾರ ರಾತ್ರಿ ಸಗಣಿ ಎರಚಿ ಕಿಡಿಗೇಡಿಗಳು ವಿಕೃತಿ ನಡೆಸಿದ್ದಾರೆ.

ಆಂದೋಲಾ ಗ್ರಾಮದಲ್ಲಿ ಶ್ರೀರಾಮ ಸೇನೆಯ ಜಿಲ್ಲಾ ಅಧ್ಯಕ್ಷ ರಮೇಶ ಮಕಾಶಿ, ಉಪಾಧ್ಯಕ್ಷ ಶಶಿಕುಮಾರ ಅಣಬಿ ಮತ್ತು ಇತರರು ತಮ್ಮ ಭಾವಚಿತ್ರಗಳು ಸಹಿತ ಶ್ರೀರಾಮ, ಆಂಜನೇಯ ಸೇರಿ ಪ್ರಮುಖರ ಭಾವಚಿತ್ರಗಳನ್ನು ಫ್ಲೆಕ್ಸ್‌ನಲ್ಲಿ ಹಾಕಲಾಗಿತ್ತು.

ಶ್ರೀರಾಮ, ಆಂಜನೇಯ, ಸಿ.ಎಂ ಯೋಗಿ ಆದಿತ್ಯನಾಥ, ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌, ಆಂದೋಲದ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಇತರರ ಭಾವಚಿತ್ರಗಳಿಗೆ ಸಗಣಿ ಹಚ್ಚಿದ್ದಾರೆ.

ಗ್ರಾಮದಲ್ಲಿ ಇರುವ ಶ್ರೀ ಕರುಣೇಶ್ವರ ಹಿರೇಮಠದ ಮಾರ್ಗತೋರುವ ನಾಮಫಲಕ ಅಪಮಾನ ಮಾಡಲಾಗಿದೆ. ನಾಮಫಲಕದಲ್ಲಿನ ಕರುಣೇಶ್ವರರ ಭಾವಚಿತ್ರ ಮತ್ತು ಸೇನೆ ಪದಾಧಿಕಾರಿಗಳ ಭಾವಚಿತ್ರಕ್ಕೂ ಸೆಗಣಿ ಎರಚಲಾಗಿದೆ.

ಆರೋಪಗಳನ್ನು ಪತ್ತೆಹಚ್ಚಿ ಬಂಧಿಸುವಂತೆ ಒತ್ತಾಯಿಸಿ ಶ್ರೀರಾಮಸೇನೆಯ ಹಾಗೂ ಶ್ರೀರಾಮನ ಭಕ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಅವರ ಮನವೊಲಿಸಿದ ಪೊಲೀಸರು, ಆಂದೋಲ ಮಠಕ್ಕೆ ಸೂಕ್ತ ಭದ್ರತೆ ಕೊಡುವ ಭರವಸೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು