Showing 20 of 849 posts • Page 29 of 43
ವಯನಾಡ್ ಭೂಕುಸಿತಕ್ಕೆ ಇಡೀ ದೇಶವೇ ಮರುಗಿದೆ. 300ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿದೆ. ಅನೇಕ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯವನ್ನು ಮಾಡುವ ಮೂಲಕ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.
ಫಿಲ್ಮ್ಫೇರ್ ದಕ್ಷಿಣ 2024 ಪ್ರಶಸ್ತಿ ಆಗಸ್ಟ್ 03ರದು ಬೆಂಗಳೂರಿನಲ್ಲಿಯೇ ಅದ್ಧೂರಿಯಾಗಿ ನಡೆದಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಕುರಿತು ಅನಂತ್ ನಾಗ್ ಮಾತನಾಡಿದ್ದು, ದರ್ಶನ್ ಘಟನೆ ಸಮಾಜಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಬಾಲಿವುಡ್ ‘ಕಿಲಾಡಿ’ ನಟ ಅಕ್ಷಯ್ ಕುಮಾರ್ ಅವರ ಮ್ಯಾಜಿಕ್ ಸದ್ಯ ಕೆಲಸ ಮಾಡ್ತಿಲ್ಲ. ಕರೋನಾ ನಂತರ, ಅಕ್ಷಯ್ ಅವರ ಬಹುತೇಕ ಎಲ್ಲಾ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಲಾಗದೇ ಸೋತಿದೆ.
ಕಾಪಿರೈಟ್ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಕ್ಷಿತ್ ಶೆಟ್ಟಿ ಇಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಕೇರಳಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿನ ಜನರ ಪ್ರೀತಿ ಕಂಡು ಅಚ್ಚರಿಗೊಂಡಿದ್ದರು. ಈಗ ನಟಿ ದೇವರ ಸ್ವಂತ ನಾಡಿನ ಜನರಿಗೆ ತಮ್ಮ ಕೈಲಾಗುವ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಉಘೇ ಉಘೇ ಮಾದೇಶ್ವರʼ ಧಾರವಾಹಿ ಖ್ಯಾತಿಯ ನಿರ್ದೇಶಕರಾದ ಕೆ. ಮಹೇಶ್ ಸುಖಧರೆ ನೇತೃತ್ವದಲ್ಲಿ ಪ್ರಧಾನ ಪಾತ್ರಗಳ ಆಯ್ಕೆಯ ಪ್ರಕ್ರಿಯೆ ನಡೆಸಲಾಗುತ್ತಿದೆ.
ಸ್ಯಾಂಡಲ್ವುಡ್ನ ರಾಜ್ ಬಿ ಶೆಟ್ಟಿ ಇತ್ತೀಚೆಗೆ ‘ರೂಪಾಂತರ’ ಎಂಬ ಚಿತ್ರದ ಮೂಲಕ ಮೋಡಿ ಮಾಡಿದ್ದರು. ಇದರ ನಡುವೆ ಅವರು ನಟಿಸಿದ ಸಿನಿಮಾ ಒಂದು ಅರೇಬಿಕ್ ಭಾಷೆಗೆ ಡಬ್ ಆಗಿ ರಿಲೀಸ್ಗೆ ಸಿದ್ಧವಾಗಿದೆ.
ಹಾಲಿವುಡ್ ನ ಖ್ಯಾತ ನಟಿ ಎರಿಕಾ ಆಶ್ ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದಾಗಿ 46 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಸೌತ್ ಇಂಡಿಯಾದ ಸ್ಟಾರ್ ಹಿರೋಯಿನ್ ಸಾಯಿ ಪಲ್ಲವಿ ಅವರು ಯಾವಾಗಲೂ ವಿವಾದಗಳಿಂದ ದೂರ ಇರೋರು. ಹಾಗಿದ್ರೂ ಸಾಯಿ ಪಲ್ಲವಿ ಬಗ್ಗೆ ಕಿಡಿಗೇಡಿಗಳು ಗಾಸಿಪ್ ಹಬ್ಬಿಸುತ್ತಾರೆ.
ಬಾಲಿವುಡ್ನ ಖ್ಯಾತ ನಟ ಸಂಜಯ್ ದತ್ ಅವರಿಗೆ ಇಂದು (ಜುಲೈ 29) ಜನ್ಮದಿನದ ಸಡಗರ. ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಸ್ಯಾಂಡಲ್ವುಡ್ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಆಗಸ್ಟ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಇವರ ಮದುವೆ ಸಮಾರಂಭವಿದ್ದು ಅತಿಥಿಗಳ ಆಹ್ವಾನಕ್ಕೆ
ಸೂಪರ್ ಮ್ಯಾನ್ಗಿಂತಲೂ ಹೆಚ್ಚು ಅಭಿಮಾನಿಗಳಿರುವ ಸೂಪರ್ ಹೀರೋ ಐರನ್ ಮ್ಯಾನ್. ಇದಕ್ಕೆ ಮುಖ್ಯ ಕಾರಣ ಐರನ್ ಮ್ಯಾನ್ ಪಾತ್ರದಲ್ಲಿ ನಟಿಸುತ್ತ ಬಂದಿರುವ ನಟ ರಾಬರ್ಟ್ ಡೌನಿ ಜೂನಿಯರ್.
ʻಒಂದು ಸರಳ ಪ್ರೇಮಕಥೆʼ ಅಭೂತಪೂರ್ವ ಯಶಸ್ಸಿನ ಬಳಿಕ ನಟಿಸಿರುವ ಬಹುನಿರೀಕ್ಷಿತ ಚಿತ್ರ ʻಪೆಪೆʼ. ಟೈಟಲ್ ಹಾಗೂ ಟೀಸರ್ ನಿಂದಲೇ ಕುತೂಹಲ ಹೆಚ್ಚಿಸಿರುವ ಈ ಸಿನಿಮಾ ಈಗ ಸೆನ್ಸಾರ್ ಪಾಸಾಗಿದೆ.
ಕನ್ನಡದ ನಟಿ ಅಮಲಾ ಪೌಲ್ ಇತ್ತೀಚೆಗೆ ಕೊಚ್ಚಿಯ ಕಾಲೇಜುವೊಂದಕ್ಕೆ ಸಿನಿಮಾ ಪ್ರಚಾರಕ್ಕಾಗಿ ಭಾಗಿಯಾಗಿದ್ದರು. ಈ ವೇಳೆ, ಅವರು ಧರಿಸಿದ ಬಟ್ಟೆ ಬಗ್ಗೆ ಭಾರೀ ಟ್ರೋಲ್ ಆಗಿದ್ದರು.
ಬಾಲಿವುಡ್ ಖ್ಯಾತ ನಿರ್ದೇಶಕಿ ಫರಾ ಖಾನ್ ಮತ್ತು ನಿರ್ದೇಶಕ ಸಾಜಿದ್ ಖಾನ್ ಅವರ ತಾಯಿ ನಿಧನರಾಗಿದ್ದಾರೆ. 79 ವಯಸ್ಸಿನ ಮೇನಕಾ ಇರಾನಿ ಅವರು ಮುಂಬೈನಲ್ಲಿ ಮೃತಪಟ್ಟಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಆಗಾಗ ಸುದ್ದಿಯಾಗುತ್ತಲೇ ಇದೆ. ಇದೀಗ ಕಿ ‘ಟಾಕ್ಸಿಕ್’ ಸಿನಿಮಾ ತಂಡದ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ‘ಟಾಕ್ಸಿಕ್’ ಚಿತ್ರೀಕರಣಕ್ಕಾಗಿ ಬೃಹತ್ ಸೆಟ್ ನಿರ್ಮಿಸಲಾಗಿದೆ.
ತೆಲುಗಿನ ನಟ ಸಂದೀಪ್ ಕಿಶನ್ ಅವರು ‘ವಿವಾಹ ಭೋಜನಂಬು’ ಹೆಸರಿನ ರೆಸ್ಟೋರೆಂಟ್ ಸಿಕಂದರಾಬಾದ್ನಲ್ಲಿ ಇದೆ. ಇತ್ತೀಚೆಗೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಈ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ್ದರು.
ಕಳೆದ ಕೆಲವು ವರ್ಷಗಳಿಂದ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಿಂದ ನಿರಂತರ ಜೀವ ಬೆದರಿಕೆ ಕರೆ ಬರುತ್ತಿವೆ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದಾರೆ.
ಬಾಲಿವುಡ್ ಬೆಡಗಿ ನೇಹಾ ಧೂಪಿಯಾ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಕಳೆದ 22 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ರೂ ನನಗೆ ಸರಿಯಾಗಿ ಸಿನಿಮಾವಕಾಶ ಸಿಗುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ನಟಿ ಮಾತನಾಡಿದ್ದಾರೆ.