ದೇಶದ ಅಗ್ರಗಣ್ಯ ಉದ್ಯಮಿ ಮುಖೇಶ್ ಅಂಬಾನಿ ಮತ್ತು ರಿಲಯನ್ಸ್ ಸಂಸ್ಥೆ ಮುಖ್ಯಸ್ಥೆ ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಿನ್ನೆ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾದರು. ನವ ದಂಪತಿಗಳು ಏಳು ಪ್ರದಕ್ಷಿಣೆಗಳನ್ನು ಹಾಕಿ ಏಳು ಜನ್ಮಗಳ ಬಂಧವನ್ನು ಒಬ್ಬರಿಗೊಬ್ಬರು ಬೆಸೆದಿದ್ದಾರೆ. ಮದುವೆಯ ನಂತರ ಅನಂತ್-ರಾಧಿಕಾ ಜೋಡಿಯ ಮೊದಲ ಚಿತ್ರಗಳು ವೈರಲ್ ಆಗಿದ್ದು, ಈ ಫೋಟೋದಲ್ಲಿ ನವ ವಧು-ವರ ಆಕರ್ಷಣೀಯವಾಗಿ ಕಾಣುತ್ತಿದ್ದಾರೆ.

ಶುಕ್ರವಾರ ಮತ್ತು ಶನಿವಾರದ ಮಧ್ಯರಾತ್ರಿ 12:30 ರ ನಡುವೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ಎಲ್ಲಾ ವಿಧಿವಿಧಾನಗಳು ಪೂರ್ಣಗೊಂಡಿವೆ. ಅನಂತ್ ಅಂಬಾನಿ ಕೆಂಪು ಬಣ್ಣದ ಶೇರ್ವಾನಿಯಲ್ಲಿ ಮಿಂಚಿದರೆ, ರಾಧಿಕಾ ಮರ್ಚೆಂಟ್ ಬಿಳಿ ಬಣ್ಣದ ಲೆಹೆಂಗಾದಲ್ಲಿ ಆಕರ್ಷಣೀವಾಗಿ ಕಾಣುತ್ತಿದ್ದರು.
ನಿನ್ನೆ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ವೈದಿಕ ವಿಧಿವಿಧಾನಗಳ ಪ್ರಕಾರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹವಾದರು. ಅನಂತ್ ಸಂಜೆ 4 ಗಂಟೆಗೆ ತನ್ನ ವಧುವಿನ ಮದುವೆಯ ಮೆರವಣಿಗೆಯೊಂದಿಗೆ ಆಂಟಿಲಿಯಾದಿಂದ ಹೊರಟರು. ಸಂಗೀತ ವಾದ್ಯಗಳೊಂದಿಗೆ, ವರನು ವಿವಾಹದ ವೇದಿಕೆಯನ್ನು ತಲುಪಿದರು.
ಸಿನಿ ಉದ್ಯಮದ ಅನೇಕ ಸ್ಟಾರ್ ನಟರು ಭಾಗಿಯಾಗಿದ್ದರು. ಪ್ರಿಯಾಂಕಾ ಚೋಪ್ರಾ ಜೋನಾಸ್, ಶಾರುಖ್ ಖಾನ್, ಸಲ್ಮಾನ್ ಖಾನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಅಂತರಾಷ್ಟ್ರೀಯ ಸೆನ್ಸೇಷನ್ ಕಿಮ್ ಕಾರ್ಡಶಿಯಾನ್ ಮದುವೆಗೆ ಸ್ಟಾರ್ ಪವರ್ ತಂದರು.

