ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಮದುವೆ ಅದ್ದೂರಿಯಾಗಿ ನೆರವೇರಿದೆ. ದೇಶ-ವಿದೇಶದಿಂದ ಸೆಲೆಬ್ರಿಟಿಗಳು ಮದುವೆಗೆ ಆಗಮಿಸಿದ್ದಾರೆ. ಇಡೀ ಬಾಲಿವುಡ್​ ಈ ಮದುವೆಯಲ್ಲಿ ಹಾಜರಿ ಹಾಕಿತ್ತು. ನಟಿಯರು ಈ ಮದುವೆಯಲ್ಲಿ ಹೆಚ್ಚು ಗಮನ ಸೆಳೆದಿದ್ದಾರೆ.

ದೇಶ ವಿದೇಶ ಗಣ್ಯರು ನಟ-ನಟಿಯರು ಬಂದಿದ್ದು ಗಮನ ಸೆಳೆದಿದ್ದಾರೆ.ಬಾಲಿವುಡ್‌,ಟಾಲಇವುಡ್‌, ಸ್ಯಾಂಡಲ್‌ವುಡ್‌,ಕಾಲಿವುಡ್‌, ಹಾಲಿವುಡ್‌ ಹೀಗೆ ಎಲ್ಲಾ ಸಿನಿಮಾ ಗಣ್ಯರು ಆಗಮಿಸಿದ್ದಾರೆ. ಆಕರ್ಷಣಿಯ ವಾದ ಉಡುಪು ಗಳಿಂದ ನಟಿಯರು ಹೆಚ್ಚು ಗಮನ ಸೆಳೆದಿದ್ದಾರೆ.

ಇನ್ನು ಈ ಅದ್ದೂರಿ ಸಮಾರಂಭಕ್ಕೆ ಸೂರ್ಯಕುಮಾರ್‌ ಯಾದವ್‌, ಜಸ್ಪ್ರಿತ್‌ಬುಮ್ರಾ, ಕೆ.ಎಲ್‌. ರಾಹುಲ್‌, ಅಜಿಂಖ್ಯಾ ರಹಾಣೆ, ಯೆಜುವೆಂದರ್‌ ಚಹಲ್‌ ಮತ್ತು ಶ್ರೇಯಸ್‌ ಐಯ್ಯರ್‌ ಸೇರಿದಂತೆ ಅನೇಕ ಕ್ರಿಕೆಟ್‌ ತಾರಾಯರು ಭಾಗಿಯಾಗಿದ್ದರು.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ಬಹುತೇಕ ಎಲ್ಲರೂ ಆಧುನಿಕ ಲೆಹೆಂಗಾವನ್ನು ಧರಿಸಿ ಮಿಂಚಿದ್ದರೆ ಆಲಿಯಾ ಇತಿಹಾಸಕ್ಕೆ ಹಿಂತಿರುಗಿದರು. ಸುಮಾರು 160 ವರ್ಷ ವಯಸ್ಸಿನ ನೇಯ್ದ ಆಶಾವಲಿ ಸೀರೆಯನ್ನು ಅವರು ಧರಿಸಿದ್ದು ಸಂಪೂರ್ಣವಾಗಿ ಎಥ್ನಿಕ್ ಲುಕ್ ಮಿಂಚಿದ್ದರು.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ಬಹುತೇಕ ಎಲ್ಲರೂ ಆಧುನಿಕ ಲೆಹೆಂಗಾವನ್ನು ಧರಿಸಿ ಮಿಂಚಿದ್ದರೆ ಆಲಿಯಾ ಇತಿಹಾಸಕ್ಕೆ ಹಿಂತಿರುಗಿದರು. ಸುಮಾರು 160 ವರ್ಷ ವಯಸ್ಸಿನ ನೇಯ್ದ ಆಶಾವಲಿ ಸೀರೆಯನ್ನು ಅವರು ಧರಿಸಿದ್ದು ಸಂಪೂರ್ಣವಾಗಿ ಎಥ್ನಿಕ್ ಲುಕ್ ಮಿಂಚಿದ್ದರು.

 

ಗೀತರಚನೆಕಾರ ಜಾವೇದ್ ಅಖ್ತರ್ ಕೂಡ ಪತ್ನಿ ಶಬಾನಾ ಅಜ್ಮಿಯೊಂದಿಗೆ ಆಗಮಿಸಿದ್ದರು. ಜಾವೇದ್ ಅಖ್ತರ್ ಬ್ಲ್ಯಾಕ್ ಕಲರ್ ಶೇರ್ವಾನಿ ಧರಿಸಿದ್ದರು. ಶಬಾನಾ ಅಜ್ಮಿ ಗೋಲ್ಡ್ ಕಲರ್ ಸೀರೆಯಲ್ಲಿ ರಾಯಲ್ ಆಗಿ ಕಾಣುತ್ತಿದ್ದರು.ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಸಲ್ಮಾನ್ ಖಾನ್ ತನ್ನ ಸಹೋದರಿ ಅರ್ಪಿತಾ ಅವರೊಂದಿಗೆ ಆಗಮಿಸಿದ್ರು. ಸಲ್ಮಾನ್ ಖಾನ್ ಸಹೋದರ ಮತ್ತು ಚಲನಚಿತ್ರ ನಿರ್ಮಾಪಕ ಅರ್ಬಾಜ್ ಖಾನ್ 2ನೇ ಪತ್ನಿ ಶುರಾ ಖಾನ್ ಅವರೊಂದಿಗೆ ಮದುವೆಯಲ್ಲಿ ಭಾಗವಹಿಸಿದ್ದರು. ದಂಪತಿ ಬ್ಲ್ಯಾಕ್ಸ್ ಕಲರ್ ಡ್ರೆಸ್ ಗಳಲ್ಲಿ ಮಿಂಚುತ್ತಿದ್ರು.

ಜೂನ್​ 12ರ ರಾತ್ರಿ 8 ಗಂಟೆಗೆ ಅನಂತ್ ಮತ್ತು ರಾಧಿಕಾ ಅವರ ವಿವಾಹ ಸಮಾರಂಭ ನೆರವೇರಿತು. ರಾತ್ರಿ 9.30ರವರೆಗೆ ವಿವಾಹ ಶಾಸ್ತ್ರಗಳು ನಡೆದಿದೆ. ಏಳು ಸುತ್ತು ಹಾಗೂ ಸಿಂಧೂರ ಹಚ್ಚುವ ಕಾರ್ಯಕ್ರಮಗಳು ನಡೆಯಿತು. ಇದೀಗ ಅನಂತ್ ಮತ್ತು ರಾಧಿಕಾ ಹೊಸ ಜೀವನಕ್ಕೆ ಕಾಲಿಟ್ಟ ಖುಷಿಯಲ್ಲಿದ್ದಾರೆ. ಅನಂತ್​ ಹಾಗೂ ರಾಧಿಕಾ ಮದುವೆ ಫೋಟೋಗಳು ಹೊರಬಿದ್ದಿದೆ. ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.