ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ದಂಪತಿ ಭೇಟಿ ನೀಡಿ ದೇವಿಯ ದರ್ಶನ ಪಡೆದು  ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು. ಕೆ.ಎಲ್ ರಾಹುಲ್ ದಂಪತಿ ಮುಲ್ಕಿ ಸೀಮೆಯ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನಕ್ಕೆ ಹಾಗೂ ಕಕ್ವಗುತ್ತು ಮೂಲ ನಾಗನ ಕ್ಷೇತ್ರಕ್ಕೆ ಭೇಟಿ ನೀಡಿದರು.

ಅಥಿಯಾ ಅವರ ತಂದೆ ನಟ ಸುನಿಲ್ ಶೆಟ್ಟಿ ಮೂಲತಃ ಮುಲ್ಕಿಯವರಾಗಿದ್ದು, ಅಳಿಯನಾದ ಬಳಿಕ ಪ್ರಥಮ ಬಾರಿಗೆ ರಾಹುಲ್ ಮುಲ್ಕಿಗೆ ಭೇಟಿ ನೀಡಿದರು. ಕೆಲ ಕಾಲ ದೇವಸ್ಥಾನದಲ್ಲಿ ರಾಹುಲ್‌ ಮತ್ತು ಅಥಿಯಾ ಸಮಯ ಕಳೆದಿದ್ದಾರೆ. ಬಪ್ಪನಾಡು ಕ್ಷೇತ್ರದ ವತಿಯಿಂದ ಕೆ.ಎಲ್ ರಾಹುಲ್ ದಂಪತಿಗೆ ಗೌರವಿಸಲಾಗಿದೆ.