ಕೊಚ್ಚಿ: ಮಾಲಿವುಡ್ ನಲ್ಲಿಈ ವರ್ಷ ಅತೀ ಹೆಚ್ಚು ಗಳಿಕೆ ಕಂಡಿರುವ ಸಿನಿಮಾಗಳಲ್ಲಿ ಒಂದಾಗಿರುವ ಪೃಥ್ವಿರಾಜ್ ಸುಕುಮಾರನ್ ನಟನೆಯ ʼಆಡುಜೀವಿತಂʼ ಮೂರು ತಿಂಗಳ ಬಳಿಕ ಓಟಿಟಿ ರಿಲೀಸ್‌ಗೆ ಸಿದ್ದವಾಗಿದೆ.
ಬ್ಲೆಸ್ಸಿ ನಿರ್ದೇಶನದ ನೈಜ ಕಥಾಹಂದರದ ಈ ಸಿನಿಮಾ ಇದೇ ವರ್ಷದ ಮಾ.28 ರಂದು ರಿಲೀಸ್ ಆಗಿತ್ತು. ಕೇರಳ ಮಾತ್ರವಲ್ಲದೆ ಸಿನಿಮಾಕ್ಕೆ ಇತರೆ ಕಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು. ಹಾಗೂ ಪೃಥ್ವಿರಾಜ್ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಹೀಗಾಗಿ ಓಟಿಟಿ ರಿಲೀಸ್ ವಿಳಂಬದ ಬಗ್ಗೆ ಪ್ರಶ್ನೆ ಮಾಡಿದ್ದರು.ʼಇದೀಗ ಕೊನೆಗೂ ನೆಟ್ ಫ್ಲಿಕ್ಸ್ ʼಆಡುಜೀವಿತಂʼ ಓಟಿಟಿ ರಿಲೀಸ್ ಗೆ ಮುಂದಾಗಿದೆ.ಇದೇ ಜು.19ರಿಂದ ಮ ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಸಿನಿಮಾ ಸ್ಟ್ರೀಮ್ ಆಗಲಿದೆ.

