ಬೆಂಗಳೂರು : ಜೀ ಕನ್ನಡದಲ್ಲಿ ಮೂಡಿಬರುತ್ತಿದ್ದ ರಿಯಾಟಿ ಶೋ ಮಹಾನಟಿ ಗ್ರ್ಯಾಂಡ್ ಫಿನಾಲೆಯ ದಿನ ಐದು ಫೈನಲಿಸ್ಟ್‌ಗಳು ವೇದಿಕೆಗೆ ತಲುಪಿದ್ದರು‌. ಇದೀಗ ಮೂರುವರೆ ತಿಂಗಳಿಂದ ಎಲ್ಲರನ್ನು ರಂಜಿಸಿದ ಈ ಶೋ ಕೊನೆಗೊಂಡಿದೆ.ಅದ್ಧೂರಿ ಗ್ರ್ಯಾಂಡ್‌ ಫಿನಾಲೆಯಲ್ಲಿ ಮೈಸೂರಿನಲ್ಲಿ ಪ್ರಿಯಾಂಕಾ ಮಹಾನಟಿ ಸೀಸನ್‌ 1ರ ವಿಜೇತೆಯಾಗಿ ಹೊರಹೊಮ್ಮಿದ್ದಾರೆ. ತರೀಕೆರೆಯ ಧನ್ಯಶ್ರೀ ರನ್ನರ್‌ ಅಪ್‌ ಆಗಿದ್ದಾರೆ.

ಇನ್ನು ಗಗನ, ಪ್ರಿಯಾಂಕಾ, ಶ್ವೇತಾ ಭಟ್, ಆರಾಧನಾ ಭಟ್ ಹಾಗೂ ಧನ್ಯಶ್ರೀ ಫಿನಾಲೆಗೆ ಆಯ್ಕೆಯಾಗಿದ್ದರು. ಐದು ಕಂಟೆಸ್ಟೆಂಟ್‌ಗಳು ಕಿರು ಚಿತ್ರ ಮಾಡಿದ್ದರು. ಅದರಲ್ಲಿ ಪ್ರಿಯಾಂಕ, ಅನುರಾಗ ಎಂಬ ಶಾರ್ಟ್ ಫಿಲ್ಮ್‌ನಲ್ಲಿ ಅದ್ಬುತವಾಗಿ ನಟಿಸಿದ್ದರು.ಐವರಲ್ಲಿ ವೇದಿಕೆ ಮೇಲೆ ಉಳಿದಿದ್ದೇ ಇಬ್ಬರು.ಪ್ರಿಯಾಂಕಗೆ ಸಿಕ್ಕಿದ್ದು 15 ಲಕ್ಷದ ಪ್ಯೂರ್ ಚಿನ್ನದ ಕಿರೀಟ. ತಮ್ಮ ಅಭಿನಯದಿಂದ ಧನ್ಯಶ್ರೀ ಗಮನ ಸೆಳೆದರೆ ಅವರ ತಂದೆ ಹಾಸ್ಯದಿಂದ ಗಮನ ಸೆಳೆದರು.

ಇದೀಗ ಎರಡನೇ ರನ್ನರ್ ಅಪ್ ಆಗಿ ಹತ್ತು ಲಕ್ಷ ಬಹುಮಾನವನ್ನು ಧನ್ಯಶ್ರೀ ಪಡೆದಿದ್ದಾರೆ. ಮೂರನೇ ಸ್ಥಾನ ಪಡೆದ ಚಿತ್ರದುರ್ಗದ ಗಗನ, ನಾಲ್ಕನೇ ಸ್ಥಾನ ಪಡೆದ ಆರಾಧನಾ ಭಟ್‌, ಐದನೇ ಸ್ಥಾನ ಶ್ವೇತಾ ಭಟ್‌ಗೆ ತಲಾ ಒಂದು ಲಕ್ಷ ಬಹು