ಅಮೆರಿಕದ ನಟಿ ಕಿಮ್ ಕರ್ದಾಶಿಯಾನ್ ಅವರು ಯಾವಾಗಲೂ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರ ಫೋಟೋಗಳು ಸದಾ ವೈರಲ್ ಆಗುತ್ತವೆ. ಆದರೆ ಯಾವಾಗ, ಯಾವ ರೀತಿ ಪೋಸ್ ನೀಡಬೇಕು ಎಂಬ ವಿವೇಚನೆ ಕೂಡ ಅವರಿಗೆ ಇರಬೇಕಿತ್ತು.
ಇತ್ತೀಚೆಗೆ ಅವರು ಗಣೇಶ ವಿಗ್ರಹದ ಮೇಲೆ ಕೈಇಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೋ ವೈರಲ್ ಆಗಿದ್ದು, ಜನರಿಂದ ಭಾರಿ ಟೀಕೆ ವ್ಯಕ್ತವಾಗಿದೆ. ಕಿಮ್ ಕರ್ದಾಶಿಯಾನ್ ಅವರಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಅವರು ಆ ಫೋಟೋವನ್ನು ಡಿಲೀಟ್ ಮಾಡಿದ್ದಾರೆ.
ಈ ಮೊದಲು ಕೂಡ ವಿದೇಶದ ಅನೇಕ ಸೆಲೆಬ್ರಿಟಿಗಳು ಇಂಥ ತಪ್ಪು ಮಾಡಿದ್ದುಂಟು. ಹಿಂದೂಗಳು ಪೂಜಿಸುವ ದೇವರ ಫೋಟೋ ಹಾಗೂ ವಿಗ್ರಹಗಳು ವಿದೇಶದ ಕೆಲವರಿಗೆ ಕೇವಲ ಅಲಂಕಾರದ ವಸ್ತುಗಳ ರೀತಿ ಕಾಣಿಸುತ್ತವೆ. ಹಾಗಾಗಿ ಅವರು ಮನಬಂದಂತೆ ಅವುಗಳ ಜೊತೆ ಫೋಟೋಗೆ ಪೋಸ್ ನೀಡುವುದುಂಟು. ಕಿಮ್ ಕರ್ದಾಶಿಯಾನ್ ಅವರು ಅದೇ ತಪ್ಪನ್ನು ಈಗ ಮಾಡಿದ್ದಾರೆ.

