ಆರ್‌ಆರ್‌ಆರ್, ಕಾಂತಾರ, ಸೀತಾ ರಾಮಂ, ಎನ್ನ ತಾನ್ ಕೇಸ್ ಕೊಡು, ಮತ್ತು ಫಿಲ್ಮ್‌ಫೇರ್ 68 ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2023 ರ ವಿಜೇತರನ್ನು ಘೋಷಿಸುತ್ತಿದ್ದಂತೆ ಅನೇಕ ದೊಡ್ಡ ಗೆಲುವುಗಳು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿವೆ.
ರಾಷ್ಟ್ರೀಯ, 12 ಜುಲೈ 2024: 2023 ರ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ ಅವಾರ್ಡ್ಸ್ 2023 ರ 68 ನೇ ಆವೃತ್ತಿಗೆ ಫಿಲ್ಮ್‌ಫೇರ್ ವಿಜೇತರನ್ನು ಘೋಷಿಸಿದೆ. ಕಳೆದ ವರ್ಷ, ಅನಿರೀಕ್ಷಿತ ಸಂದರ್ಭಗಳಿಂದಾಗಿ, ಜನವರಿ 1, 2022 ರಿಂದ ಡಿಸೆಂಬರ್ 31, 2022 ರ ನಡುವೆ ಬಿಡುಗಡೆಯಾದ ಚಲನಚಿತ್ರಗಳಿಗಾಗಿ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2023 ಅನ್ನು ನಡೆಸಲಾಗಲಿಲ್ಲ. ಅದೇನೇ ಇದ್ದರೂ, ಫಿಲ್ಮ್‌ಫೇರ್ ಸೌತ್ ಚಿತ್ರರಂಗದ ಅಸಾಧಾರಣ ಪ್ರತಿಭೆಗಳನ್ನು ಮತ್ತು ಒಟ್ಟಾರೆಯಾಗಿ ಉದ್ಯಮಕ್ಕೆ ಅವರ ಮಹತ್ವದ ಕೊಡುಗೆಗಳನ್ನು ಗೌರವಿಸಲು ತನ್ನನ್ನು ತಾನು ಸಮರ್ಪಿಸಿಕೊಂಡಿದೆ.
ಕನ್ನಡ ಸಿನಿಮಾದ ಅಸಾಧಾರಣ ಸಾಧನೆಗಾಗಿ, 777 ಚಾರ್ಲಿ ಚಿತ್ರಕ್ಕಾಗಿ ಕಿರಣ್‌ರಾಜ್ ಕೆ ಅವರಿಗೆ ಕನ್ನಡದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ನೀಡಲಾಯಿತು. ಕಾಂತಾರ ಕನ್ನಡದ ಅತ್ಯುತ್ತಮ ಚಿತ್ರ ಎಂದು ಹೆಸರಿಸಲ್ಪಟ್ಟಿತು. ಗಮನಾರ್ಹವಾಗಿ, ಚೈತ್ರಾ ಜೆ ಆಚಾರ್ ಅವರು ತಲೆದಂಡ ಚಿತ್ರದಲ್ಲಿನ ಪಾತ್ರಕ್ಕಾಗಿ ಕನ್ನಡದ ಲೀಡಿಂಗ್ ರೋಲ್ (ಮಹಿಳೆ) ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಅಂತಿಮವಾಗಿ, ಬ್ಲಾಕ್‌ಬಸ್ಟರ್ ಚಲನಚಿತ್ರ ಕಾಂತಾರದಲ್ಲಿನ ಅದ್ಭುತ ಅಭಿನಯಕ್ಕಾಗಿ ರಿಷಬ್ ಶೆಟ್ಟಿ, ಕನ್ನಡದ ಲೀಡಿಂಗ್ ರೋಲ್ (ಪುರುಷ) ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದರು.
ತೆಲುಗು ಚಿತ್ರರಂಗಕ್ಕೆ, ಮುಖ್ಯವಾಗಿ, ಆರ್‌ಆರ್‌ಆರ್, ಅತ್ಯುತ್ತಮ ತೆಲುಗು ಚಲನಚಿತ್ರ ಎಂಬ ಪ್ರಶಸ್ತಿಯನ್ನು ಪಡೆದಿದೆ. ಆರ್‌ಆರ್‌ಆರ್ ನಲ್ಲಿ ಅವರ ಮನಮುಟ್ಟುವ ಅಭಿನಯಕ್ಕಾಗಿ, ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ಅವರು ತೆಲುಗು ವಿಭಾಗದ ಲೀಡಿಂಗ್ ರೋಲ್ (ಪುರುಷ) ಅತ್ಯುತ್ತಮ ನಟ ವಿಭಾಗದ ಅಡಿಯಲ್ಲಿ ವಿಜೇತರಾಗಿದ್ದಾರೆ. ಮತ್ತು ಸೀತಾ ರಾಮಂ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಮೃಣಾಲ್ ಠಾಕೂರ್ ಅವರಿಗೆ ತೆಲುಗು ವಿಭಾಗದ ಲೀಡಿಂಗ್ ರೋಲ್ (ಮಹಿಳೆ) ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಇದಲ್ಲದೆ, ನಿರ್ದೇಶಕ S. S. ರಾಜಮೌಳಿ ಅವರು RRR ಗಾಗಿ ಪಾಪ್ಯುಲರ್ ಚಾಯ್ಸ್ ತೆಲುಗು ವಿಭಾಗದಿಂದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ತಮಿಳು ಸಿನಿಮಾದ ಅಸಾಧಾರಣ ಪ್ರಯತ್ನವಾಗಿ, ಪೊನ್ನಿಯಿನ್ ಸೆಲ್ವನ್ ಭಾಗ 1, ಅತ್ಯುತ್ತಮ ತಮಿಳು ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನಿರ್ದೇಶಕ ಮಣಿರತ್ನಂ ಅವರ ಸೂಪರ್ ಹಿಟ್ ಚಿತ್ರ ಪೊನ್ನಿಯಿನ್ ಸೆಲ್ವನ್ ಭಾಗ 1 ಗಾಗಿ ಪಾಪ್ಯುಲರ್ ಚಾಯ್ಸ್ ತಮಿಳಿನ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದಾರೆ. ನಟ ಕಮಲ್ ಹಾಸನ್ ಮತ್ತು ನಟಿ ಸಾಯಿ ಪಲ್ಲವಿ ಅವರಿಗೆ ಕ್ರಮವಾಗಿ ವಿಕ್ರಮ್ ಮತ್ತು ಗಾರ್ಗಿಯಲ್ಲಿನ ಅದ್ಭುತ ಅಭಿನಯಕ್ಕಾಗಿ ತಮಿಳು ವಿಭಾಗದ ಲೀಡಿಂಗ್ ರೋಲ್ ಅತ್ಯುತ್ತಮ ನಟ (ಪುರುಷ) ಮತ್ತು ಲೀಡಿಂಗ್ ರೋಲ್ (ಮಹಿಳೆ) ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಲಾಗಿದೆ.
ಮಲಯಾಳಂ ಸಿನಿಮಾದ ಸಾಧನೆಗಾಗಿ, ಜಯ ಜಯ ಜಯ ಜಯ ಹೇ ಚಿತ್ರದಲ್ಲಿನ ಅವರ ಅದ್ಬುತ ಅಭಿನಯಕ್ಕಾಗಿ ದರ್ಶನಾ ರಾಜೇಂದ್ರನ್ ಅವರು ಮಲಯಾಳಂ ವಿಭಾಗದ ಲೀಡಿಂಗ್ ರೋಲ್ (ಮಹಿಳೆ) ಅತ್ಯುತ್ತಮ ನಟಿ ಎಂದು ಗುರುತಿಸಲ್ಪಟ್ಟರು. ಎನ್ನ ತಾನ್ ಕೇಸ್ ಕೊಡು ಚಿತ್ರದಲ್ಲಿ ಕುಂಚಾಕೊ ಬೋಬನ್ ಅವರು ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ಮಲಯಾಳಂ ವಿಭಾಗದ ಲೀಡಿಂಗ್ ರೋಲ್ (ಪುರುಷ) ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಮಲಯಾಳಂ ವಿಭಾಗದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಎನ್ನ ತಾನ್ ಕೇಸ್ ಕೊಡು ಚಲನಚಿತ್ರ ತನ್ನದಾಗಿಸಿಕೊಂಡಿತು. ಮತ್ತು ಅಂತಿಮವಾಗಿ, ಮಲಯಾಳಂನ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ರತೀಶ್ ಬಾಲಕೃಷ್ಣನ್ ಪೊದುವಾಲ್ ಅವರು ಎನ್ನ ತಾನ್ ಕೇಸ್ ಕೊಡು ಚಿತ್ರಕ್ಕಾಗಿ ಪಡೆದರು.
68 ನೇ ಆವೃತ್ತಿಯ ಎಲ್ಲ ವಿಜೇತರನ್ನು ಅಭಿನಂದಿಸುತ್ತಾ, ವರ್ಲ್ಡ್‌ವೈಡ್ ಮೀಡಿಯಾದ ನಿರ್ದೇಶಕ ಮತ್ತು ZENL BCCL ಟಿವಿ ಮತ್ತು ಡಿಜಿಟಲ್ ನೆಟ್‌ವರ್ಕ್‌ನ ಸಿಇಒ ಶ್ರೀ. ರೋಹಿತ್ ಗೋಪಕುಮಾರ್ ಮಾತನಾಡಿದರು. “ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರರಂಗಗಳು ತನ್ನ ಅತ್ಯುತ್ತಮ ಗುಣಮಟ್ಟ ಮತ್ತು ಸೃಜನಶೀಲ ಪ್ರತಿಭೆಯಿಂದ ನಮ್ಮನ್ನು ಗಾಢವಾಗಿ ಪ್ರಭಾವಿಸಿವೆ. ಅಲ್ಲದೇ ಅವು ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ ಮತ್ತು ಭಾರತೀಯ ಚಿತ್ರರಂಗಕ್ಕೆ ಹೊಸ ಮಾನದಂಡಗಳನ್ನು ನೀಡುತ್ತಿವೆ. ಫಿಲ್ಮ್‌ಫೇರ್‌ನಲ್ಲಿ, ಈ ಅಸಾಧಾರಣ ಪ್ರತಿಭೆಗಳನ್ನು ಗೌರವಿಸಲು ನಮ್ಮನ್ನು ನಾವು ಸಮರ್ಪಿಸಿಕೊಂಡಿದ್ದೇವೆ ಮತ್ತು ನಮ್ಮ ಪ್ರೇಕ್ಷಕರ ನಿರಂತರ ಬೆಂಬಲದೊಂದಿಗೆ, ನಾವು ಈ ಬದ್ಧತೆಯನ್ನು ಎತ್ತಿಹಿಡಿಯುತ್ತೇವೆ. ಉದ್ಯಮಕ್ಕೆ ತಮ್ಮ ಅತ್ಯುತ್ತಮ ಕೊಡುಗೆಗಳನ್ನು ನೀಡಿರುವ ಎಲ್ಲ ವಿಜೇತರಿಗೆ ಅಭಿನಂದನೆಗಳು” ಎಂದು ಹೇಳಿದರು.
ಫಿಲ್ಮ್‌ಫೇರ್‌ನ ಪ್ರಧಾನ ಸಂಪಾದಕರಾದ ಶ್ರೀ ಜಿತೇಶ್ ಪಿಳ್ಳೈ, ಮಾತನಾಡಿ, “ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರೋದ್ಯಮಗಳಲ್ಲಿ ಅಸಾಧಾರಣ ಕಲಾತ್ಮಕತೆ, ಸೃಜನಶೀಲತೆ ಮತ್ತು ಸಮರ್ಪಣೆಯನ್ನು ಗೌರವಿಸಲು ನಾವು ಸಂತೋಷಪಡುತ್ತೇವೆ. ಫಿಲ್ಮ್‌ಫೇರ್‌ನಲ್ಲಿ, ಅದ್ಭುತ ಪ್ರತಿಭೆಗಳನ್ನು ಗುರುತಿಸಲು ನಾವು ಹೆಮ್ಮೆಪಡುತ್ತೇವೆ ಮತ್ತು ಎಲ್ಲ ವಿಜೇತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ” ಎಂದು ಹೇಳಿದರು.

