ಬೆಂಗಳೂರು : ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ʻಮ್ಯಾಕ್ಸ್ʼ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಆ್ಯಕ್ಷನ್ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತೊಮ್ಮೆ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ಟೀಸರ್ ಅಭಿಮಾನಿಗಳಲ್ಲಿ ಇನ್ನೂ ಕುತೂಹಲ ಹೆಚ್ಚಿಸಿದೆ.ವಿಕ್ರಾಂತ್ ರೋಣʼ ಚಿತ್ರದ ಬಳಿಕ ಸುಮಾರು 2 ವರ್ಷಗಳ ತರುವಾಯ ಈ ಸಿನಿಮಾ ತರೆಕಾಣಲಿದ್ದು, ಕುತೂಹಲ ಕೆರಳಿಸಿದೆ.
ವಿಜಯ್ ಕಾರ್ತಿಕೇಯ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ʼಮ್ಯಾಕ್ಸ್ʼ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜತೆಗೆ ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಸುನೀಲ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ʼವಿಕ್ರಾಂತ್ ರೋಣʼ ಬಳಿಕ ಸುದೀಪ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವ ಅವಕಾಶ ಅಜನೀಶ್ ಲೋಕನಾಥ್‌ಗೆ ಸಿಕ್ಕಿದ್ದು, ಹಾಡುಗಳ ಬಗ್ಗೆಯೂ ಕುತೂಹಲ ಗರಿಗೆದರಿದೆ. ತನು ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪುಲಿ ಎಸ್. ಹಾಗೂ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇನ್ನೂ ಈ ಟೀಸರ್‌ನಲ್ಲಿ ರೌಡಿಗಳ ಅಖಾಡದಲ್ಲಿ ನಿಂತು ಎರಡು ಕೈಗಳಿಂದ ಮಚ್ಚು ಬೀಸುವ ಮಾಸ್ ಲುಕ್‌ನಲ್ಲಿ ಕಿಚ್ಚ ಸುದೀಪ್ ಮಿಂಚು ಹರಿಸಿದ್ದಾರೆ. ಹಿನ್ನಲೆ ಸಂಗೀತವೂ ಗಮನ ಸೆಳೆಯುವಂತಿದೆ.

