Showing 20 of 1954 posts • Page 15 of 98
ಶ್ರೀ ಅಖಿಲ ಹವ್ಯಕ ಮಹಾಸಭೆಯು ನೀಡುವ ವಾರ್ಷಿಕ ವಿಶೇಷ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಮಾರ್ಚ್ 26 ಭಾನುವಾರದಂದು ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆಯುವ 83ನೇಯ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ 2025-26 ನೇಯ ಸಾಲಿನ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸತತ ಏರುಗತಿಯಲ್ಲಿ ಸಾಗುತ್ತಿದ್ದ ಚಿನ್ನದ ಬೆಲೆ ಈಗ ಪಾತಾಳಕ್ಕೆ ಕುಸಿಯುತ್ತಿದ್ದು, 1 ಲಕ್ಷ ರೂ. ಸನಿಹಕ್ಕೆ ಬರುವ ಹಾಗಿದೆ.
ಹಣದುಬ್ಬರ ಸಂಬಂಧಿತ ವಾರ್ಷಿಕ ಹೆಚ್ಚಳದ ಭಾಗವಾಗಿ ಏಪ್ರಿಲ್ 1 ರಿಂದ ರಾಜ್ಯಾದ್ಯಂತ ಟೋಲ್ ದರಗಳು 3-5% ರಷ್ಟು ಹೆಚ್ಚಾಗಲಿದ್ದು, ವಾಹನ ಬಳಕೆದಾರರು ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಮೂವರು ವೈದ್ಯರು ಜನದಟ್ಟಣೆಯ ರಸ್ತೆಯಲ್ಲಿ ಮದ್ಯ ಸೇವಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯರ ಮೇಲೆ ಮೂಡುಬಿದಿರೆ ಪೊಲೀಸ್ ಇನ್ ಸ್ಪೆಕ್ಟರ್ ಸಂದೇಶ್ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ದೇವನಹಳ್ಳಿಯ ಹೊರವಲಯದ ರಾಣಿ ಕ್ರಾಸ್ ಬಳಿ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ, ವೇಗವಾಗಿ ಬಂದ ಲಾರಿಯೊಂದು ಪ್ರವಾಸಿ ಟೆಂಪೋ ಟ್ರಾವೆಲರ್ (ಟಿಟಿ) ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಿಟಿಎಂ ರಸ್ತೆಯಲ್ಲಿ ಟ್ರಿಪಲ್ ರೈಡಿಂಗ್ ಕಂಡುಬಂದಿದ್ದು, ಕೆಲವರು ಹೆಲ್ಮೆಟ್ ಧರಿಸಿಲ್ಲ. ಆಘಾತಕಾರಿ ಸಂಗತಿಯೆಂದರೆ, ಒಬ್ಬ ವ್ಯಕ್ತಿ ಬಿಯರ್ ಬಾಟಲಿಯನ್ನು ಹಿಡಿದುಕೊಂಡು ಬೈಕ್ ಚಲಾಯಿಸುತ್ತಿದ್ದ, ಮತ್ತು ಹಿಂಬದಿ ಸವಾರ ಬಹಿರಂಗವಾಗಿ ಮದ್ಯಪಾನ ಮಾಡುತ್ತಿದ್ದ, ಯಾವುದೇ ಭಯ ಅಥವಾ ಜವಾಬ್ದಾರಿಯಿಲ್ಲದೆ ಸಾರ್ವಜನಿಕವಾಗಿ ಅಜಾಗರೂಕ ಕೈ ಸನ್ನೆಗಳನ್ನು ಮಾಡುತ್ತಿದ್ದಾನೆ.
ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ ಯುಗಾದಿ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಅಪ್ಪು ಉತ್ಸವ ಮತ್ತು ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಮಾರ್ಚ್ 15ರ ಭಾನುವಾರದಂದು ರಾಮಮೂರ್ತಿ ನಗರದ ನಾಟ್ಯ ಪ್ರಿಯ ಆಡಿಟೋರಿಯಂ ನಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9:00ವರೆಗೆ ನಿರಂತರವಾಗಿ ಅದ್ದೂರಿಯಾಗಿ ನಡೆಸಲಾಯಿತು.
ಹೆಚ್.ಬಿ.ಆರ್ ಬಡಾವಣೆಯಲ್ಲಿರುವ ಕಂಪ್ಯೂಟರ್ ಹಾರ್ಡ್ವೇರ್ ಮಳಿಗೆಯೊಂದಕ್ಕೆ ಬುರ್ಖಾ ಧರಿಸಿ ನುಗ್ಗಿದ ತಂದೆ-ಮಗನ ಜೋಡಿ ಸುಮಾರು 80 ಲಕ್ಷ ರೂಪಾಯಿ ಮೌಲ್ಯದ ಬಿಡಿಭಾಗಗಳನ್ನು ಕಳ್ಳತನ ಮಾಡಿದ್ದಾರೆ.
ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಅಭಿವೃದ್ಧಿಪಡಿಸುವ ತರಬೇತಿ ಕಾರ್ಯಕ್ರಮಕ್ಕೆ ಇಲ್ಲಿನ ಮದನಾಯಕನಹಳ್ಳಿ ಗ್ರಾಮದ ಬಸವೇಶ್ವರ ಲೇಔಟ್ನಲ್ಲಿ ಚಾಲನೆ ನೀಡಲಾಯಿತು.
ಜೆಪ್ಟೋ ಮೂಲಕ ಡೆಲಿವರಿ ಮಾಡಲಾದ ಆಮುಲ್ ಹಾಲಿನ ಪ್ಯಾಕೆಟ್ ಅಸಹಜವಾಗಿ ಉಬ್ಬಿರುವುದು ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಕಂಡುಬಂದಿದೆ.
ಇಸ್ರೇಲ್ ಹಾಗೂ ಇರಾನ್ ಯುದ್ಧದಿಂದ ಬೆಂಗಳೂರು ಸೇರಿದಂತೆ ಎಲ್ಲೆಡೆ ಗ್ಯಾಸ್ ಸಮಸ್ಯೆ ಎದುರಾದ ಬೆನ್ನಲ್ಲೇ ಇದೀಗ ಪೆಟ್ರೋಲ್ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 2 ರೂ ಏರಿಕೆಯಾಗಿದೆ. ಲೀಟರ್ಗೆ 106 ರೂಪಾಯಿ ಇದ್ದ ಪೆಟ್ರೋಲ್ ದರ 108.50 ರೂಪಾಯಿಗೆ ಏರಿಕೆಯಾಗಿದೆ. ಇನ್ನು 91 ರೂಪಾಯಿ ಇದ್ದ ಡೀಸೆಲ್ ದರ ಇದೀಗ 93.50 ರೂಪಾಯಿ ಏರಿಕೆ ಮಾಡಲಾಗಿದೆ.
ಕುಟುಂಬವು ರೀಲ್ ವಿಡಿಯೋಗಾಗಿ ವೃದ್ಧ ತಂದೆಯನ್ನು ಗೋಣಿಚೀಲದಲ್ಲಿ ತುಂಬಿಸಿ, ನಗರದಿಂದ ಹೊರಗೆ “ಪಾರ್ಸೆಲ್ ಕಳುಹಿಸಲು” ಕೊರಿಯರ್ ಕಚೇರಿಗೆ ಕರೆದೊಯ್ದಿದೆ. ಕೊರಿಯರ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ.
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್ ಪಕ್ಷದ ಪಾಲಿಗೆ ಪ್ರತಿಷ್ಠೆಯಾಗಿದೆ. ನಮಗೆ ಗೆಲುವೇ ಮಾನದಂಡ ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಿಯಮಗಳನ್ನು ಮೀರಿ ಎಲ್ಲೆಂದರಲ್ಲಿ ಪೊಲೀಸ್ ಚೌಕಿಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಎಷ್ಟು ಸರಿ? ಎಂದು ಶಾಸಕ ವೇದವ್ಯಾಸ ಕಾಮತ್ ಅಧಿವೇಶನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ 2 ದಿನಗಳವರೆಗೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಾಗುವ ಮುನ್ಸೂಚನೆ ಇದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆಯ ಅಬ್ಬರ ನಗರದ ಹಲವೆಡೆ ಮಂಗಳವಾರ ತಡರಾತ್ರಿವರೆಗೆ ಮಳೆ ಸುರಿದಿದೆ.
ವಿಧಾನಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಶ್ರೀಮತಿ ಲಕ್ಷ ಹೆಬ್ಬಾಳ್ಳರ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಶ್ರೀಮತಿ ಶಾಮ್ಲಾ ಇಟ್ಬಾಲ್ ಭಾ.ಆ.ಸೇ. ಇವರ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಭಾಗವಹಿಸಿದ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್ ಶೆಟ್ಟಿ ಹಾಗೂ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಸೋಮನಾಥ್ ಮಹಾಜನ್ ಶೆಟ್ಟರ್ ಮನವಿ ಸಮರ್ಪಣೆ ಮಾಡಿ ಸಚಿವೆ ಅವರಿಗೆ ವಿನಂತಿ ಮಾಡಿದರು.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಪವನ್ (ಎ3) ಪರ ವಕೀಲರಿಗೆ ಸಾಕ್ಷ್ಯ ತಿದ್ದಿದ ಆರೋಪದ ಮೇರೆಗೆ 5,000 ರೂ. ದಂಡ ವಿಧಿಸಲಾಗಿದೆ.
26/11 ಮುಂಬೈ ದಾಳಿಯ ವೀರ ನಾಯಕ, ಅಶೋಕ ಚಕ್ರ ಪುರಸ್ಕೃತ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜನ್ಮದಿನದಂದು (ಮಾರ್ಚ್ 15) ಅವರ ಪೋಷಕರಾದ ಕೆ. ಉನ್ನಿಕೃಷ್ಣನ್ ಮತ್ತು ಧನಲಕ್ಷ್ಮಿ ಅವರು ಬೆಂಗಳೂರಿನ ಯಲಹಂಕದಲ್ಲಿರುವ ‘ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ’ಯಲ್ಲಿರುವ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಒಬ್ಬ ಬಸ್ ಕಂಡಕ್ಟರ್ ತನ್ನ ಚಾಲಕನಿಗೆ “10 ನೇ ತರಗತಿಯ ವಿದ್ಯಾರ್ಥಿಗಳು ಲಿಫ್ಟ್ ಕೇಳುವಲ್ಲೆಲ್ಲಾ ನಿಲ್ಲಿಸಿ.