Categories: ಮಂಗಳೂರು

ಮಂಗಳೂರು ಸೆಂಟ್ರಲ್: 2 ಪ್ರತ್ಯೇಕ ಫ್ಲಾಟ್ ಫಾರಂ ನಿರ್ಮಾಣಕ್ಕೆ ಮುಂದಾದ ರೈಲ್ವೆ ಇಲಾಖೆ

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಬಹುಕಾಲದ ಬೇಡಿಕೆಗೆ ಹಾಗೂ ಹೊಸ ರೈಲುಗಳ ಆರಂಭ ಕ್ಕೆ ತೊಡಕಾಗಿದ್ದ 4ಮತ್ತು 5ನೇ ಫ್ಲಾಟ್ ಫಾರಂ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಮುಂದಡಿ ಇಟ್ಟಿದೆ.

ಸೆಂಟ್ರಲ್ ನಲ್ಲಿ ಹೆಚ್ಚುವರಿಯಾಗಿ 4ಮತ್ತು 5ನೇ ಫ್ಲಾಟ್ ಫಾರಂ ನಿರ್ಮಾಣಕ್ಕೆ ಈ ಹಿಂದೆಯೇ ಯೋಜಿಸಲಾಗಿತ್ತು ಆದರೆ ಹೊಸ ಫ್ಲಾಟ್ ಫಾರಂ ಕಾಮಗಾರಿ ಕೈಗೆತ್ತಿಕೊಳ್ಳಲು ಪ್ರಸ್ತುತ ಇರುವ ಪಿಟ್ ಲೈನ್ ನನ್ನು (ಬೋಗಿಗಳ ತಾಂತ್ರಿಕ ಕಾಮಗಾರಿ ನಡೆಸುವ ಹಳಿ )ಸ್ಥಳಾಂತರಿ ಸುವುದು ಅಗತ್ಯವಾಗಿತ್ತು ಇದೀಗ ಇದರ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು ಸ್ಥಳಾಂತರಗೊಂಡ ಕೂಡಲೇ ಹೊಸ ಫ್ಲಾಟ್ ಫಾರಂ ಕಾಮಗಾರಿ ಕೂಡ ಪ್ರಾರಂಭವಾಗಲಿದೆ.

ಮಂಗಳೂರು ಸೆಂಟ್ರಲ್ ನಲ್ಲಿ ಫ್ಲಾಟ್ ಫಾರಂ ಖಾಲಿ ಇಲ್ಲ ಎಂಬ ಸಬೂಬು ನೀಡಿ ಪ್ರಸ್ತುತ ಕಂಕನಾಡಿ ನೇತ್ರಾವತಿ ಸೇತುವೆ ಸಮೀಪ ಕೆಲವು ರೈಲುಗಳನ್ನು ನಿಲ್ಲಿಸಲಾಗುತ್ತದೆ , 3ಫ್ಲಾಟ್ ಫಾರಂಗಳಲ್ಲಿ ನಿಂತಿರುವ ರೈಲುಗಳು ಮುಂದಕ್ಕೆ ಚಲಿಸದೇ ಉಳಿದ ರೈಲುಗಳು ನಿಲ್ದಾಣ ಪ್ರವೇಶಿಸುವಂತಿಲ್ಲ ಹೊಸ ಫ್ಲಾಟ್ ಫಾರಂ ಆದರೆ ಮತ್ತೊಂದು ರೈಲು ನಿಲುಗಡೆ ಅವಕಾಶ ನೀಡುವುದರಿಂದ ಸಮಸ್ಯೆ ಬಹುತೇಕ ನಿವರಣೆಯಾಗುತ್ತದೆ ಜತೆಗೆ ಹೊಸ ರೈಲುಗಳ ಸೇವೆಯನ್ನು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಆರಂಭಿಸಲು ಅವಕಾಶವಾಗುತ್ತದೆ ಈ ಮಧ್ಯೆ ಹೊಸ ರೈಲು ಆರಂಭಕ್ಕೆ ಮಂಗಳೂರು ಸೆಂಟ್ರಲ್ ನಲ್ಲಿ ಫ್ಲಾಟ್ ಫಾರಂ ಇಲ್ಲ ಎಂಬ ನೆಪ ಹೇಳುವ ಖಯಾಲಿಯಿತ್ತು .

2ಫ್ಲಾಟ್ ಫಾರಂ ನಿರ್ಮಾಣದಿಂದ ಹೊಸ ರೈಲು ಸೇವೆಗೆ ಮಂಗಳೂರು ಸೆಂಟ್ರಲ್ ನಿಂದ ಅವಕಾಶ ಸಿಗುವ ಸಾಧ್ಯತೆಯಿದೆ , ಪರಿಣಾಮವಾಗಿ ರೈಲು ನಿಲ್ದಾಣ ಹೆಚ್ಚು ಜನರ ಬಳಕೆಗೆ ಲಭ್ಯವಾಗಲಿದೆ ಈವರೆಗೆ ಸೆಂಟ್ರಲ್ ನಿಲ್ದಾಣದಿಂದ ಹದಿನೆಂಟು ಬೋಗಿಗಳು ನಿಲ್ಲುವ ಪಿಟ್ ಲೈನ್ ಬೋಗಿಗಳ ತಾಂತ್ರಿಕ ಕಾಮಗಾರಿ ನಡೆಸುವ ಹಳಿ ಇತ್ತು , ಹೊಸದಾಗಿ 4ಮತ್ತು ಐದನೇ ಫ್ಲಾಟ್ ಫಾರ್ಮ್ ನಿರ್ಮಿಸಲು ಪಿಟ್ ಲೈನ್ ಸ್ಥಳಾಂತರಿಸುವ ಅನಿವಾರ್ಯವಿದ್ದು ಈ ನೆಲೆಯಲ್ಲಿ 24ಬೋಗಿಗಳು ನಿಲ್ಲುವ ಸಾಮರ್ಥ್ಯ ವುಳ್ಳ ಹೊಸ ಪಿಟ್ ಲೈನ್ ಅನ್ನು 6ಪಾಯಿಂಟ್ ಎಪ್ಪತ್ತ್ 6ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ .

ಎರಡೂ ಬದಿಗಳಲ್ಲಿರುವ ಕ್ಯಾಟ್ ವಾಕ್ ಗಳು ಪಿಟ್ ಲೈನ್ ನಲ್ಲಿ ಬೋಗಿಗಳ ನಿರ್ವಹಣೆ ಮತ್ತು ಸ್ವಚ್ಛತೆ ಕಾರ್ಯ ಸುಲಭವಾಗಿ ನಡೆಯಲು ಸಹಾಯ ಮಾಡುತ್ತವೆ ಪಿಟ್ ಲೈನ್ ನಲ್ಲಿ ಬೋಗಿಗಳ ಪ್ರಾಥಮಿಕ ನಿರ್ವಹಣೆ ಮಾಡಲಾಗುತ್ತದೆ ಪ್ರತಿ ಸಂಚಾರ ಬಳಿಕ ಬೋಗಿಗಳ ಗೇರ್ ,ಬ್ರೇಕ್ ,ತಪಾಸನೆ ,ವಿದ್ಯುತ್ ,ವ್ಯವಸ್ಥೆ ನೀರು ತುಂಬಿಸುವುದು ಬೋಗಿ ಸ್ವಚ್ಛತೆ ಮತ್ತಿತರ ನಿರ್ಮಾಣ ಕೆಲಸಗಳನ್ನು ನಡೆಸಲಾಗುತ್ತದೆ ಈ ಪ್ರಕಾರ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹೊಸ ಪಿಟ್ ಲೈನ್ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ.

Gayathri SG

Recent Posts

ಅನೈತಿಕ ಸಂಬಂಧ ಶಂಕೆ: ಬೀದರ್​​ನಲ್ಲಿ ಯುವಕರಿಂದ ನೈತಿಕ ಪೊಲೀಸ್​ ಗಿರಿ

ಹಿಂದೂ ಯುವಕನ ಜೊತೆ ಮುಸ್ಲಿಂ ಸಮುದಾಯದ ಮಹಿಳೆ ಕುಳಿತಿದಕ್ಕೆ ಅದೇ ಕೋಮಿನ ಯುವಕರ ಗುಂಪೊಂದು ಹಲ್ಲೆ ನಡೆಸಿ, ನೈತಿಕ ಪೊಲೀಸ್​​…

7 hours ago

ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಆರೋಪಿ ಸೆರೆ

ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀಕನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ  ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದ ಆರೋಪಿಯನ್ನು…

8 hours ago

ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ

ಸಿಲಿಕಾನ್ ಸಿಟಿಯಲ್ಲಿ ಹುಸಿ ಬಾಂಬ್ ಬೆದರಿಕೆ ಮೇಲ್ ಮುಂದುವರೆದಿದ್ದು, ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಾದ ನಾಗವಾರದ ಸೇಂಟ್ ಫಿಲೋಮಿನಾ ಸೇರಿದಂತೆ…

8 hours ago

ಬೀದರ್‌: ಜಿಲ್ಲೆಯಾದ್ಯಂತ ತಂಪೆರೆದ ಮಳೆ, ಸಿಡಿಲಿಗೆ ವ್ಯಕ್ತಿ ಸಾವು

ಜಿಲ್ಲೆಯಾದ್ಯಂತ ಭಾನುವಾರ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.

8 hours ago

ಆಮ್ ಆದ್ಮಿ ಪಕ್ಷವನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ

ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಚುನಾವಣಾ…

9 hours ago

ಗೌಡರ ಕುಟುಂಬಕ್ಕೆ ಮೋಸ ಮಾಡುವುದಿಲ್ಲ: ಕೆ.ಮಂಜು

ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ಎಚ್.ಡಿ.ದೇವೇಗೌಡರು, ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ ಎಂದು ಶಾಸಕ ಎ.…

10 hours ago