Bengaluru 23°C
Ad

ರೇವ್ ಪಾರ್ಟಿಯಲ್ಲಿ ನಾನಿಲ್ಲವೆಂದು ಪೊಲೀಸರಿಗೆ ಚಳ್ಳೆಹಣ್ಣು ನಟಿ ಹೇಮಾಗೆ ಬಿಗ್‌ ಶಾಕ್‌ !

Hema

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಈ ರೇವ್ ಪಾರ್ಟಿಯಲ್ಲಿ 100ಕ್ಕೂ ಹೆಚ್ಚು ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಸಿಕ್ಕಿದ್ದರು ಎಂದು ಬೆಂಗಳೂರು ಪೊಲೀಸರು ಬಹಿರಂಗಪಡಿಸಿದ್ದಾರೆ. ಅವರಲ್ಲಿ ನಟಿ ಹೇಮಾ ಹೆಸರನ್ನೂ ಪೊಲೀಸರು ಪ್ರಕಟಿಸಿದ್ದಾರೆ. ಆದರೆ ಈ ವಿಚಾರ ಹೊರೆಗೆ ಬೀಳುತ್ತಿದ್ದಂತೆ ನಟಿ ಅಭಿಮಾನಿಗಳು ಮತ್ತು ಪೊಲೀಸರಿಗೆ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.

ತಾನು ಆ ರೇವ್ ಪಾರ್ಟಿಯಲ್ಲಿ ಇರಲಿಲ್ಲ.. ಹೈದರಾಬಾದ್‌ನ ಫಾರ್ಮ್ ಹೌಸ್‌ನಲ್ಲಿ ಇದ್ದೇನೆ ಎಂದು ವಿಡಿಯೋವನ್ನು ಸಹ ಬಿಡುಗಡೆ ಮಾಡಿದ್ದಾಳೆ . ಇದೀಗ ಆ ಘಟನೆಗೆ ಸಂಬಂಧಿಸಿದಂತೆ ನಟಿ ಹೇಮಾ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿರುವುದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ಹೆಸರುಗಳು ಹೊರಬರಲಿವೆ ಎಂದು ವರದಿಯಾಗಿದೆ.

Ad
Ad
Nk Channel Final 21 09 2023
Ad