ಮಾರಕ ವೈರಸ್​ಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ 7 ಚಿರತೆ ಮರಿಗಳು ಬಲಿ

ಆನೇಕಲ್: ಪೆಲಿನ್ ಪ್ಯಾನ್ಲೂಕೋಪೇನಿಯಾ ಎಂಬ ಮಾರಕ ವೈರಸ್​​ಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಏಳು ಚಿರತೆ ಮರಿಗಳು ಮೃತಪಟ್ಟಿವೆ. ರಾಜ್ಯದ ನಾನಾ ಭಾಗಗಳ ರೈತರ ಜಮೀನುಗಳ ಬಳಿ ಸಿಕ್ಕ ಚಿರತೆ ಮರಿಗಳನ್ನು ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನವಕ್ಕೆ ಕರೆತರಲಾಗಿತ್ತು.

ಈ ಚಿರತೆ ಮರಿಗಳನ್ನು ಝೂನಲ್ಲಿ ಇರಿಸಲಾಗಿತ್ತು. ಆದರೆ ಈ ಚಿರತೆ ಮರಿಗಳು ಸೋಂಕಿಗೆ ಮೃತಪಟ್ಟಿವೆ. ಈ ಮಾರಕ ರೋಗ ಮೊದಲಿಗೆ ಆಗಸ್ಟ್ 22ರಂದು ಕಾಣಿಸಿಕೊಂಡಿದ್ದು, ಸೆ.5ರ ಒಳಗೆ ರೋಗಕ್ಕೆ ಏಳು ಚಿರತೆಗಳ ಸಾವಿಗೀಡಾದವು.

ಸೋಂಕು ತಗುಲಿದ ಬಳಿಕ ಜೀರ್ಣ ಕ್ರೀಯೆ ಆಗದೇ ರಕ್ತ ವಾಂತಿಯಾಗಿ ಪ್ರಾಣ ಬಿಟ್ಟಿವೆ. ಈ ಸೋಂಕು ಮನೆಯ ಸಾಕು ಬೆಕ್ಕುಗಳಿಂದ ಹರಡುತ್ತದೆ. ಮನೆಯಲ್ಲಿ ಬೆಕ್ಕು ಸಾಕಿದ್ದ ಅನಿಮಲ್ ಕೀಪರ್​​​ಗಳು ಊಟ ಪ್ರಾಣಿಗಳಿಗೆ ಆಹಾರ ನೀಡಲು ಹೋದಾಗ ಸೋಂಕು ಅಂಟಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ಡಾ.ಉಮಾಶಂಕರ್, ಡಾ. ಮಂಜುನಾಥ್ ನೇತೃತ್ವದಲ್ಲಿ 11 ಜನರ ತಂಡ ರಚಿಸಲಾಗಿದೆ.

ಈ ತಂಡ ಬೂಸ್ಟರ್ ಡೋಸ್ ನೀಡಿ ಪ್ರಾಣಿಗಳಿಗೆ ಸೋಂಕು ತಗುಲದಂತೆ ಕ್ರಮ ಕೈಗೊಂಡಿದೆ.

 

Ashitha S

Recent Posts

ಮೋದಿಗೆ ಬೀಳ್ಕೊಡುಗೆ ನೀಡಲು ದೇಶದ ಜನರು ಸಿದ್ಧರಾಗಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ಮೋದಿಗೆ ಬೀಳ್ಕೊಡುಗೆ ನೀಡಲು ದೇಶದ ಜನರು ತಯಾರಾಗಿದ್ದು, ಇಂಡಿಯಾ ಒಕ್ಕೂಟವು ಸರ್ಕಾರ ರಚಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ…

9 mins ago

ಕಾನ್ಪುರದ 10 ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆ

ಕಾನ್ಪುರದ 10 ಶಾಲೆಗಳಿಗೆ ಬಾಂಬ್ ಬೆದರಿಕೆ, ರಷ್ಯಾದ ಸರ್ವರ್‌ಗೆ ಇಮೇಲ್ ಲಿಂಕ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಾಂಬ್ ಬೆದರಿಕೆ…

11 mins ago

ಸೋಲಿಗರಿಂದ ಕುಂಬೇಶ್ವರನಿಗೆ ರೊಟ್ಟಿ ನೈವೇದ್ಯ: ಏನಿದು ಹಬ್ಬ?

ತಾವು ಕಷ್ಟಪಟ್ಟು ಬೆಳೆದ ಬೆಳೆ ಮನೆಯನ್ನು ತುಂಬಿದಾಗ ಎಲ್ಲಿಲ್ಲದ ಸಂಭ್ರಮ ಮನೆ ಮಾಡುತ್ತದೆ. ಇಂತಹ  ಸಂದರ್ಭದಲ್ಲಿ ಎಲ್ಲರೂ ಜತೆ ಸೇರಿ…

19 mins ago

ಎಮ್.ಎಲ್.ಸಿ ಟಿಕೆಟ್ ಹಂಚಿಕೆ ಬಿಜೆಪಿಯಲ್ಲಿ ಬಂಡಾಯದ ಬಿಸಿ

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಬಿಜೆಪಿ‌ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿ.ಪಂ‌ ಮಾಜಿ ಉಪಾಧ್ಯಕ್ಷ, ಬಿಜೆಪಿ ಮುಖಂಡ ಸುರೇಶ ಸಜ್ಜನ್ ಟಿಕೆದ…

27 mins ago

ಎನ್‌ಸಿಪಿ ರದ್ದತಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಎಬಿವಿಪಿ ಪ್ರತಿಭಟನೆ

ರಾಜ್ಯ ಸರ್ಕಾರವು ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದು ಎಂದು ಒತ್ತಾಯಿಸಿ ಅಖಿಲ ಭಾರತೀಯ…

30 mins ago

ವರುಣನ ಆರ್ಭಟ : ಮಲೆ ಮಹದೇಶ್ವರ ಬೆಟ್ಟದ ಮಜ್ಜನ ಬಾವಿಯೇ ಮುಳುಗಡೆ, ನೀರು ಕಲುಷಿತ..!

ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರತಿವರ್ಷದಂತೆ ಈ ವರ್ಷವೂ, ಮಳೆಗಾಲದಲ್ಲಿ ಜೋರು ಮಳೆ ಬಂದರೆ ಪ್ರತಿ ಬಾರಿಯೂ…

39 mins ago