Showing 20 of 46 posts • Page 1 of 3
ಪರ ಪುರುಷನ ಜೊತೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ಅಂಗನವಾಡಿಯಲ್ಲಿಯೇ ಅಕ್ಕನನ್ನು ತಮ್ಮ ಕತ್ತು ಸೀಳಿ ಭೀಕರವಾಗಿ ಕೊಲೆಗೈದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಬರ್ಬರ ಕೊಲೆ ಮಾಡಿರುವ ಘಟನೆ ಹಾವೇರಿಯ ಕಬ್ಬೂರು ಗ್ರಾಮದಲ್ಲಿ ನಡೆದಿದೆ.
ಬೆಂಗಳೂರಿನಿಂದ ಗದಗ ನಗರಕ್ಕೆ ಹೋಗುತ್ತಿದ್ದ ಪಲ್ಲಕ್ಕಿ ಬಸ್ಗೆ ಆಕಸ್ಮಿಕ ಬೆಂಕಿ ತಗುಲಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ದೇವರಗುಡ್ಡ ಗ್ರಾಮದಲ್ಲಿ ಬಳಿ ರಾಜ್ಯಹೆದ್ದಾರಿಯಲ್ಲಿ ನಡೆದಿದೆ.
ಇರಾನ್-ಇಸ್ರೇಲ್ ಅಮೆರಿಕದ ನಡುವೆ ಯುದ್ಧದ ತೀವ್ರತೆಯ ಬಿಸಿ ಭಾರತಕ್ಕೂ ತಟ್ಟಿದೆ. ದಿನನಿತ್ಯ ವಸ್ತುಗಳ ಬೆಲೆಯೂ ಹೆಚ್ಚುತ್ತಿದೆ. ಇದೀಗ ಆಟೋ ಗ್ಯಾಸ್ ದರ ಏಕಾಏಕಿ ಏರಿಕೆಯಾಗಿರುವುದರಿಂದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
8 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳದ ರಾಶಿಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಮೆಕ್ಕೆಜೋಳದ ರಾಶಿ ಸುಟ್ಟು ಭಸ್ಮವಾದ ಘಟನೆ ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮದುವೆಯಾದ 6 ನೇ ದಿನಕ್ಕೆ ಹುಡುಗನಿಗೆ ಶಾಕ್ ಆಗುವ ಘಟನೆ ನಡೆದಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆ ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಣ ಇಲಾಖೆ, ಹಾಗೂ ತಾಲೂಕು ಪಂಚಾಯತ್ ವಿನೂತನ ಪ್ರಯತ್ನ ನಡೆಯುತ್ತಿದ್ದು, ಹಾವೇರಿ ತಾಲೂಕಿನ 33 ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳಲ್ಲಿ ಮೊಬೈಲ್, ಟಿವಿ ಬಂದ್ ಮಾಡುವಂತೆ ಗ್ರಾಪಂ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಅತಿಥಿ ಶಿಕ್ಷಕ ಹಾಗೂ SDMC ಅಧ್ಯಕ್ಷರು ಹೊಡೆದಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಶಾಲೆಯಲ್ಲಿ ನಡೆದಿದೆ.
ಶಿಕ್ಷಕನಿಗೆ ಚಪ್ಪಲಿ ಮೆರವಣಿಗೆ ನಡೆಸಿದ ಕೇಸ್ ಗೆ ಸಂಬಂಧಿಸಿದಂತೆ ಕರ್ತವ್ಯಲೋಪದ ಆರೋಪದ ಮೇಲೆ ಹಾವೇರಿಯಲ್ಲಿ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದ್ದು,
ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿದ ಕೇಸ್ ಗೆ ಸಂಬಂಧಪಟ್ಟಂತೆ 22 ಮಂದಿಯ ವಿರುದ್ಧ FIR ದಾಖಲಾಗಿದೆ. ಸವಣೂರಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ
ಮೊಬೈಲ್ ರಿಪೇರಿ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಹಾವೇರಿ ನಗರದ ಬಸ್ ನಿಲ್ದಾಣದ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.
ಮನೆಯೊಂದರ ಎದುರು ತುಂಬಿಸಿಟ್ಟಿದ್ದ ಬಕೆಟ್ ನ ನೀರಿಗೆ ಬಿದ್ದು ಅಸ್ವಸ್ಥಗೊಂಡಿದ್ದ 14 ತಿಂಗಳ ಮಗು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ರಾತ್ರಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ದೀಪಾವಳಿ ಹಬ್ಬದ ಸಂದರ್ಭ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅನಾಹುತ ಸಂಭವಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಹೋರಿ ತಿವಿದು ವೃದ್ಧರೊಬ್ಬರು ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ವರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ತಾಲೂಕಿನ ವರದಾಹಳ್ಳಿಯಲ್ಲಿ ಭಾನುವಾರ ನಡೆದಿದೆ. ಗಂಡನ ಮನೆಯಲ್ಲಿ ದಿನನಿತ್ಯ ಆಗುತ್ತಿದ್ದ ಭಿನ್ನಾಭಿಪ್ರಾಯ,
ಗಣೇಶ ಮೆರವಣಿಗೆ ವೇಳೆ ಡಿಜೆ ಹಾಕಿದ 16 ಮಂದಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಹಾವೇರಿ ನಗರದ ವಿವಿಧೆಡೆ ಗಣೇಶ ವಿಸರ್ಜನೆ ವೇಳೆ ಡಿಜೆ ಹಾಕಿ, ಹಿಂದೂ ಕಾರ್ಯಕರ್ತರು ಹಾಗೂ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದರು.
ಶ್ರೀರಾಚೋಟೇಶ್ವರ 18ನೇ ಜಾತ್ರಾ ಮಹೋತ್ಸವ ನಿಮಿತ್ಯ ಜೈ ಭಾರತ್ ಮಾತಾ ಸಮಿತಿ (ರಿ) ನವದೆಹಲಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಹವಾ ಮಲ್ಲಿನಾಥ್ ಮಹಾರಾಜರು ಶರಣ ನಗರ ಗ್ರಾಮಕ್ಕೆ ಆಗಮಿಸಿದರು.
ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಬಹಳ ವಿಶೇಷವಾಗಿ ಮಹಾ ಕುಂಭಮೇಳ ನಡೆಯಿತು, ಪ್ರಯಾಗ್ ರಾಜ್ ನ ಮಹಾ ಕುಂಭಮೇಳ ಮರು ಸೃಷ್ಟಿಯನ್ನ ಹೋಳಿ ಹಬ್ಬದ ಅಂಗವಾಗಿ ಹಾವೇರಿಯಲ್ಲಿ ಬಹಳ ವಿಶೇಷವಾಗಿ ಆಚರಣೆ ಮಾಡಲಾಯಿತು.
ಕಾರಿನಿಂದ 33 ಲಕ್ಷ ರೂಪಾಯಿ ಕದ್ದ ಪ್ರಕರಣವನ್ನು ಹಾವೇರಿ ಪೊಲೀಸರು 72 ಗಂಟೆಯಲ್ಲಿ ಭೇದಿಸಿದ್ದು, ಆಂಧ್ರ ಪ್ರದೇಶದ ಆರೋಪಿ ಜಗದೀಶ್ (28) ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ. ಈತನಿಂದ 30 ಲಕ್ಷ ರೂ ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಾರ್ ಗ್ಲಾಸ್ ಒಡೆದು 33 ಲಕ್ಷ ರೂಪಾಯಿ ನಗದು ಕಳವು ಮಾಡಿ ಗ್ಯಾಂಗ್ ಪರಾರಿಯಾದ ಘಟನೆ ಹಾವೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಡರಾತ್ರಿ ಮನೆಯಲ್ಲಿದ್ದ ಫ್ರಿಡ್ಜ್ ಬ್ಲಾಸ್ಟ್ ಆಗಿ ವಸ್ತುಗಳು ಸುಟ್ಟು ಕರಕಲಾದ ಘಟನೆ ಹಾವೇರಿಯ ಮಂಜುನಾಥ ನಗರದ ಎ ಬ್ಲಾಕ್ನಲ್ಲಿ ನಡೆದಿದೆ.