ಹಾವೇರಿ: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಬಹಳ ವಿಶೇಷವಾಗಿ ಮಹಾ ಕುಂಭಮೇಳ ನಡೆಯಿತು, ಪ್ರಯಾಗ್ ರಾಜ್ ನ ಮಹಾ ಕುಂಭಮೇಳ ಮರು ಸೃಷ್ಟಿಯನ್ನ ಹೋಳಿ ಹಬ್ಬದ ಅಂಗವಾಗಿ ಹಾವೇರಿಯಲ್ಲಿ ಬಹಳ ವಿಶೇಷವಾಗಿ ಆಚರಣೆ ಮಾಡಲಾಯಿತು.

ಪ್ರಯಾಗರಾಜ್ ನಾಗ ಸಾಧುಗಳೇ ಹಾವೇರಿ ಜಿಲ್ಲೆಗೆ ಪ್ರತ್ಯಕ್ಷ ರಾಗಿದ್ದಾರೆ ಎನ್ನುವ ರೀತಿಯಲ್ಲಿ ಹಲವು ಕಲಾವಿದರಿಗೆ ಬಣ್ಣ ಹಚ್ಚಿ ವೇಷ ಭೂಷಣ ಧರಿಸಿ ಮಹಾ ಕುಂಭಮೇಳ ಮರು ಸೃಷ್ಟಿ ಮಾಡಲಾಯಿತು, ಆನೆ ಒಂಟೆ ಕುದುರೆ ಟ್ರ್ಯಾಕ್ಟರ್ ಚಕ್ಕಡಿ ಮೂಲಕ ಮೆರವಣಿಗೆಯಂತೂ ಬಹಳ ವಿಶೇಷವಾಗಿ ನಡೆಯಿತು.
ಜಿಲ್ಲೆಯ ಜನತೆಗೆ ಪ್ರಯಾಗರಾಜ್ ನಲ್ಲಿ ನಡೆದ ಮಹಾಕುಂಭ ಮೇಳವೇ ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿದೆ ಮಹಾಕುಂಭಮೇಳವನ್ನು ನೋಡಿ ಜಿಲ್ಲೆಯ ಜನರು ಸಂತಸ ವ್ಯಕ್ತಪಡಿಸಿದರು, ಮೆರವಣಿಗೆಯು ಹಾವೇರಿ ನಗರದ ಪ್ರಮುಖ ಬೀದಿ ಬೀದಿಗಳಲ್ಲಿ ಸಂಚರಿಸಿತು, ಕುಂಭಮೇಳ ಮೆರವಣಿಗೆಯಲ್ಲಿ ಹಿರಿಯ ಕಲಾವಿದರು ಬಾಲ ಕಲಾವಿದರು ಮಹಿಳೆಯರು ಪ್ರಮುಖರು ಭಾಗಿಯಾಗಿದ್ದರು.

ನಗರದ ಹಲವು ಪ್ರಮುಖರು ನಮಗೆ ಪ್ರಯಾಗರಾಜ್ ಹೋಗಿ ಕುಂಭ ಮೇಳ ನೋಡುವ ಅವಕಾಶ ಸಿಗಲಿಲ್ಲ ಅದರ ಬದಲಿಗೆ ನಾವು ಹಾವೇರಿಯಲ್ಲಿ ಮರು ಸೃಷ್ಟಿಯಾಗಿ ಪ್ರಯಾಗರಾಜ್ ನ ಮಹಾಕುಂಭಮೇಳವನ್ನು ಬಹಳ ಆನಂದದಿಂದ ವೀಕ್ಷಿಸಿದವು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

