ಹಾವೇರಿ: ಎಸ್ ಎಸ್ ಎಲ್ ಸಿ ಪರೀಕ್ಷೆ ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಣ ಇಲಾಖೆ, ಹಾಗೂ ತಾಲೂಕು ಪಂಚಾಯತ್ ವಿನೂತನ ಪ್ರಯತ್ನ ನಡೆಯುತ್ತಿದ್ದು, ಹಾವೇರಿ ತಾಲೂಕಿನ 33 ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳಲ್ಲಿ ಮೊಬೈಲ್, ಟಿವಿ ಬಂದ್ ಮಾಡುವಂತೆ ಗ್ರಾಪಂ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಎಸ್ ಎಸ್ ಎಲ್ ಸಿ ಮಕ್ಕಳು ಓದುವ ದೃಷ್ಟಿಯಿಂದ ಶಿಕ್ಷಣ ಇಲಾಖೆ, ತಾಪಂ ನಿಂದ ವಿನೂತನ ಪ್ರಯತ್ನ ನಡೆಯುತ್ತಿದೆ. ರಾತ್ರಿ 7 ಘಂಟೆಯಿಂದ 9 ರವರೆಗೆ ಟಿವಿ ಮೊಬೈಲ್ ಬಂದ್ ಮಾಡಲು ಪಾಲಕರಿಗೆ ಮನವಿ ಮಾಡುವಂತೆ ತಾಪಂ ಇಒ ಪರಮೇಶ ಹುಬ್ಬಳ್ಳಿ ಪಿಡಿಓಗಳಿಗೆ ಆದೇಶ ನೀಡಿದ್ದಾರೆ.
ಹಾವೇರಿ ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಗ್ರಾಪಂ ಸಿಬ್ಬಂದಿ ಡಂಗೂರ ಸಾರುತ್ತಿದ್ದಾರೆ. ಎಸ್ ಎಸ್ ಎಲ್ ಸಿ ಯಲ್ಲಿ 2024-25 ರಲ್ಲಿ ರಾಜ್ಯಕ್ಕೆ 13 ನೆ ಸ್ಥಾನ ಪಡೆದಿತ್ತು. ಶಿಕ್ಷಣ ಇಲಾಖೆ, ತಾಪಂ ನ ವಿನುತನ ಪ್ರಯತ್ನಕ್ಕೆ ತಾಲುಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
–ದೀಪಕ ಉಪಳೆ ಹಾವೇರಿ

