ಹಾವೇರಿ : ಅತಿಥಿ ಶಿಕ್ಷಕ ಹಾಗೂ SDMC ಅಧ್ಯಕ್ಷರು ಹೊಡೆದಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಶಾಲೆಯಲ್ಲಿ ನಡೆದಿದೆ.

ಕೈ ಕೈ ಮಿಲಾಯಿಸಿ ಪುಂಡರಂತೆ ಅತಿಥಿ ಶಿಕ್ಷಕ & SDMC ಅಧ್ಯಕ್ಷ ಹೊಡೆದಾಡಿಕೊಂಡಿದ್ದಾರೆ. SDMC ಅಧ್ಯಕ್ಷನ ದಾದಾಗೀರಿಗೆ ಶಿಕ್ಷಕ ಬೇಸತ್ತಿದ್ದನು. ಮಾದರಿಯಾಗಬೇಕಾದವರ ನಡುವೆಯೇ ಮಾರಾಮಾರಿ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಹೊಡೆದಾಟದ ವಿಡಿಯೋ ವೈರಲ್ ಆಗಿದೆ.
ವಯಕ್ತಿಕ ಭಿನ್ನಾಭಿಪ್ರಾಯ ಹಾಗೂ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಶರ್ಟ್ ಹಿಡಿದು ಕೈ ಕೈ ಮಿಲಾಯಿಸಿ ಪರಸ್ಪರ ಹೊಡೆದಾಡಿದ ಶಿಕ್ಷಕ ಗಂಟೇರ್ & SDMC ಅಧ್ಯಕ್ಷ ಸತೀಶ್ ಬೋಸ್ಲೆ. ಹಾನಗಲ್ ಪಟ್ಟಣದಲ್ಲಿರೋ ಶಾಸಕರ ಮಾದರಿ ಪ್ರಾಥಮಿಕ ಶಾಲೆ ಮಕ್ಕಳ ಪರದಾಟವಾಗಿದೆ.

ಅತಿಥಿ ಶಿಕ್ಷಕ ಗಂಟೇರ್ ಗೆ SDMC ಅಧ್ಯಕ್ಷ ಸತೀಶ್ ಬೋಸ್ಲೆ ಅವಾಚ್ಯವಾಗಿ ನಿಂದಿಸಿದ್ದರು. ಇದರಿಂದ ಮಾತಿಗೆ ಮಾತು ಬೆಳೆದು ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಇತ್ತ ಶಾಲೆಯಲ್ಲಿ ಮೂಲ ಭೂತ ಸೌಕರ್ಯಗಳಿಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಕಿತ್ತೋದ ಶೌಚಾಲಯ, ನೀರಿನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಆಗರವಾಗಿರೋ ಶಾಲೆ ಇದಾಗಿದೆ. ಶಾಲೆ ಸಮಸ್ಯೆಗಳನ್ನು ಬಗೆಹರಿಸೋದು ಬಿಟ್ಟು ಶಿಕ್ಷಕರು, SDMC ಅಧ್ಯಕ್ಷರು ಹೊಡೆದಾಡಿಕೊಂಡಿದ್ದಾರೆ.
-ದೀಪಕ ಉಪಳೆ
ಹಾವೇರಿ

