ಹಾವೇರಿ : ಶಿಕ್ಷಕನಿಗೆ ಚಪ್ಪಲಿ ಮೆರವಣಿಗೆ ನಡೆಸಿದ ಕೇಸ್ ಗೆ ಸಂಬಂಧಿಸಿದಂತೆ ಕರ್ತವ್ಯಲೋಪದ ಆರೋಪದ ಮೇಲೆ  ಹಾವೇರಿಯಲ್ಲಿ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದ್ದು, ಸವಣೂರಿನ ಸಿಪಿಐ ದೇವಾನಂದ ಹಾಗೂ ಹೆಡ್ ಕಾನ್‌ಸ್ಟೆಬಲ್ ಮಲ್ಲಿಕಾರ್ಜುನ ಅವರನ್ನು ಸಸ್ಪೆoಡ್ ಮಾಡಲಾಗಿದೆ. ಇಬ್ಬರು ಅಧಿಕಾರಿಗಳನ್ನ ಅಮಾನತು ಮಾಡಿ ಹಾವೇರಿ ಎಸ್ಪಿ ಯಶೋದಾ ವಂಟಗೋಡಿ ಆದೇಶ ಹೊರಡಿಸಿದ್ದಾರೆ

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಶಿಕ್ಷಕನಿಗೆ ಧರ್ಮದೇಟು ನೀಡಿ ಚಪ್ಪಲಿ ಹಾರ ಹಾಕಿ ಸ್ಥಳೀಯರು ಮೆರವಣಿಗೆ ಮಾಡಿದ್ದರು. ಡಿ.10 ರಂದು ಸವಣೂರು ಪಟ್ಟಣದಲ್ಲಿ ಶಿಕ್ಷಕ ಜಗದೀಶ್ ಎಂಬಾತನ ಮೇಲೆ ಸಾರ್ವಜನಿಕವಾಗಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮತ್ತು ಧರ್ಮದೇಟು ನೀಡಿ ಹಲ್ಲೆ ನಡೆಸಲಾಗಿತ್ತು.

ಶಿಕ್ಷಕನ ಮರ್ಯಾದೆ ಕಳೆದು ಬೀದಿ ಬೀದಿಯಲ್ಲಿ ಹಲ್ಲೆ ಮಾಡಿ ಮೆರವಣಿಗೆ ಮಾಡಿದ್ದರು. ಈ ಸಂಬಂಧ ಸವಣೂರಿನ ಪೊಲೀಸರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೆ ಎಸ್ಪಿ ಕರ್ತವ್ಯ ಲೋಪದಡಿಯಲ್ಲಿ ಇಬ್ಬರು ಪೊಲೀಸರನ್ನು ಅಮಾನತು ಮಾಡಿದ್ದಾರೆ.