ಹಾವೇರಿ: ಮದುವೆಯಾದ 6 ನೇ ದಿನಕ್ಕೆ ಹುಡುಗನಿಗೆ ಶಾಕ್ ಆಗುವ ಘಟನೆ ನಡೆದಿದೆ. ಮ್ಯಾರೇಜ್ ಬ್ರೋಕರ್ ಎಡವಟ್ಟಿಗೆ ಹುಡುಗನ ಲೈಪ್ ನಲ್ಲಿ ಬಿರುಗಾಳಿ ಎದ್ದಿದೆ. ಮೊದಲು ಮದುವೆಯಾಗಿ 2 ಮಕ್ಕಳಿದ್ರೂ, ಮತ್ತೊಂದು ಮದುವೆ ಮಾಡಲಾಗಿದೆ. ಮುಂಚೆ ಮದುವೆಯಾಗಿರೋ ವಿಚಾರ ಮುಚ್ಚಿಟ್ಟು ವಂಚಿಸಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ನಡೆದಿದೆ.
ತುಮ್ಮಿನಕಟ್ಟಿ ಗ್ರಾಮದ ನಿವಾಸಿ ರವಿ ಜವಳಿ ಬಾಳಲ್ಲಿ ಬಿರುಗಾಳಿ ಎದ್ದಿದೆ. 6 ದಿನಗಳ ಹಿಂದಷ್ಟೇ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಗಿರಿಯಾಪುರ ಗ್ರಾಮದ ರೇಖಾ ಕೆ ಎಂಬಾಕೆಯ ಜೊತೆಯಲ್ಲಿ ಮದುವೆ ಮಾಡಲಾಗಿತ್ತು. ಹೀರೆಕೆರೂರಿನ ದುರ್ಗಾದೇವಿ ದೇವಸ್ಥಾನದಲ್ಲಿ ಫೆ 06 ರಂದು ಮದುವೆ ಮಾಡಲಾಗಿತ್ತು.
ಮದುವೆ ಮುನ್ನ 2 ಮಕ್ಕಳಿರೋ ವಿಚಾರ ಮುಚ್ಚಿಟ್ಟಿರೋ ಆರೋಪ ಕೇಳಿಬಂದಿದೆ. 2 ಹೆಣ್ಣು ಮಕ್ಕಳನ್ನ ದತ್ತು ತೆಗೆದುಕೊಂಡಿದ್ದೇನೆ ಅಂತ ರೇಖಾ ಹೇಳಿದ್ದರು. ಸದ್ಯ ರೇಖಾಳಿಗೆ ಮುಂಚೆ ಮದುವೆಯಾಗಿ ಮಕ್ಕಳಿರೋ ವಿಚಾರ ತಿಳಿದು ಶಾಕ್ ಆಗಿದೆ. ಬ್ರೋಕರ್ ಗಳ ಮೂಲಕವಾಗಿ ರೇಖಾಳನ್ನು ರವಿ ಮದುವೆಯಾಗಿದ್ದನು.
ದಂಜನ್ ನಾಯಕ್ & ಶಾರದಮ್ಮ ಎಂಬ ಬ್ರೋಕರ್ ಮೂಲಕ ಮದುವೆ ಮಾಡಲಾಗಿತ್ತು. ಹಲಗೇರಿ ಪೊಲೀಸ್ ಠಾಣೆಗೆ ರವಿ ಜವಳಿಯಿಂದ ದೂರು ನೀಡಲಾಗಿದೆ. ರೇಖಾ ಮತ್ತು ಬ್ರೋಕರ್ ಗಳ ವಿರುದ್ಧ ವಂಚನೆ ಬಗ್ಗೆ ದೂರು ದಾಖಲಾಗಿದೆ.
-ದೀಪಕ ಉಪಳೆ
ಹಾವೇರಿ

