Showing 20 of 2245 posts • Page 40 of 113
ಗೌಡನಕಟ್ಟೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ ಹುಲಿಯನ್ನು ಸೆರೆ ಹಿಡಿಯಲಾಗಿದೆ. ತಡರಾತ್ರಿ ತಾಯಿ ಹುಲಿ ಸೆರೆಯಾಗಿದೆ. ಮರಿ ಹುಲಿಗಳಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿ ಕಿತ್ತಾಟ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಅಭಿಮಾನಿಗಳು ಚಾಮುಂಡೇಶ್ವರಿ ಮೊರೆ ಹೋಗಿದ್ದಾರೆ.
ಮನೇಲಿ ಊಟ ಮಾಡ್ತಿದ್ದ ವ್ಯಕ್ತಿಯನ್ನ ಕರೆದೊಯ್ದ ಪೇದೆಯೊಬ್ಬ ಠಾಣೆ ಬಳಿ ಕರೆತಂದು ಹಿಗ್ಗಾಮುಗ್ಗ ಥಳಿಸಿರುವ ಪ್ರಕರಣ ನಂಜನಗೂಡುನಲ್ಲಿ ಬೆಳಕಿಗೆ ಬಂದಿದೆ.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಅಧೀಕ್ಷಕರಾಗಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಮುರಳೀಧರ್ ಎಂ.ರವರನ್ನ ಅವರ ಮಾತೃ ಇಲಾಖೆ ಜಲಸಂಪನ್ಮೂಲ ಇಲಾಖೆಗೆ ಹಿಂದುರುಗುವಂತೆ ಆದೇಶ ಹೊರಡಿಸಲಾಗಿದೆ.
ದಕ್ಷಿಣ ಕಾಶಿ ಖ್ಯಾತಿಯ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ 3 ಕೋಟಿ ರೂ ಕಾಣಿಕೆ ಸಂಗ್ರಹವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಲಲಿತ ಆಡಳಿತ ವ್ಯವಸ್ಥೆಯನ್ನು ರೂಪಿಸಿ, ದೇಶದ ಜನರ ಬದುಕಿಗೆ ದಾರಿಯಾಗಬೇಕಾದರೆ ಭಾರತ ದೇಶದ ಸಂವಿಧಾನವೇ ಪ್ರಮುಖ ಕಾರಣ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಬಣ್ಣಿಸಿದರು.
ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರನ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಈ ಬಾರಿ ದಾಖಲೆ ಮೊತ್ತ ಸಂಗ್ರಹವಾಗಿದೆ.
ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನಾವೆಲ್ಲರೂ ಸುಭದ್ರವಾಗಿ ಇದ್ದೇವೆ ಎಂದರೆ ಅದಕ್ಕೆ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರು ನೀಡಿರುವ ಸಂವಿಧಾನವೇ ಕಾರಣ
ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಬೆಂಬಲಕ್ಕೆ ಪ್ರತಾಪ್ ಸಿಂಹ ನಿಂತಿದ್ದಾರೆ. ನಾನು ಕೂಡ ದರ್ಶನ್ ಅಭಿಮಾನಿ ಎಂದು ಪ್ರತಾಪ್ ಸಿಂಹ ಹೇಳಿದರು.
ಅಯೋಧ್ಯೆಯಲ್ಲಿ ಧರ್ಮ ಧ್ವಜಾರೋಹಣ ಆಗಿದೆ. ಇದು ಎಲ್ಲರಿಗೂ ಸಂತಸದ ಸಂದರ್ಭ. 2024ರಲ್ಲಿ ರಾಮಲಲ್ಲಾ ಗರ್ಭಗುಡಿ ಪೂರ್ಣಗೊಂಡಿತ್ತು.
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಲೆಂದು ಅಯ್ಯಪ್ಪ ಮಾಲಾಧಾರಿಗಳಿಂದ ಪ್ರಾರ್ಥನೆ ಸಲ್ಲಿಸಲಾಯಿತು. ಸಿಎಂ ಸಿದ್ದರಾಮಯ್ಯ ಭಾವಚಿತ್ರ ಹಿಡಿದು ಅಯ್ಯಪ್ಪ ಮೂಲಾಧಾರಿಗಳು ಶಬರಿಮಲೆ ಏರಿದರು.
ಕರ್ತವ್ಯದ ಮೇಲಿದ್ದ ಕ್ಷೇತ್ರಶಿಕ್ಷಣಾಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿ ನಂಜನಗೂಡಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಸಾಕಾನೆಗಳಿಗೆ ಮಜ್ಜನ ಮಾಡಲಾಗಿದೆ. ನಿರಂತರವಾಗಿ ಹುಲಿ ಕಾರ್ಯಾಚರಣೆಯಲ್ಲಿ ಭಾಗಿಯಾದ ಆನೆಗಳು ರಿಲ್ಯಾಕ್ಸ್ ಆಗಿವೆ.
ಸರಗೂರಿನಲ್ಲಿ ಇಂದು ಬೆಳಗಿನ ಜಾವ 4 ಗಂಟೆಯಲ್ಲಿ ಹುಲಿ ಸೆರೆಯಾಗಿದೆ. ದೇವಲಾಪುರ ಗ್ರಾಮದ ಅಳಗಂಚಿ ಅರಣ್ಯದಂಚಿನಲ್ಲಿ ಸೆರೆ ಹಿಡಿಯಲಾಗಿದೆ.
ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಅಳವಡಿಸಲಾದ ವಾಣಿಜ್ಯ ಜಾಹಿರಾತು ಕಮಾನು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಫುಟ್ ಪಾತ್ ನಿಂದ ಮತ್ತೊಂದು ಬದಿಯ ಫುಟ್ ಪಾತ್
ಕಳೆದ ಒಂದು ವರ್ಷಗಳ ಹಿಂದೆ ನಂಜನಗೂಡಿನ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ನೆಸ್ಲೆ ಕಾರ್ಖಾನೆಯಲ್ಲಿ ಬಾಯ್ಲರ್ ನೀರು ಸ್ಫೋಟಗೊಂಡು ಗುತ್ತಿಗೆ ಆಧಾರ
ಡಿ.ಕೆ. ಶಿವಕುಮಾರ್ ಸಿಎಂ ಆಗಲಿ ಎಂದು ಅಯ್ಯಪ್ಪ ಮಾಲಾಧಾರಿಗಳು ಪ್ರಾರ್ಥನೆ ಮಾಡಿದರು. ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಡಿಕೆಶಿ ಅಭಿಮಾನಿಗಳು ಪ್ರಾರ್ಥಿಸಿದರು.
ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಗ್ರಾಮಸ್ಥರು ಗುದ್ದಲಿ ಪೂಜೆ ನೆರವೇರಿಸಿದರು.
ಜೆಡಿಎಸ್ ಪಕ್ಷ ಸ್ಥಾಪನೆಯಾಗಿ 25 ವರ್ಷ ತುಂಬಿದ ಹಿನ್ನೆಲೆ ಬೆಳ್ಳಿ ಹಬ್ಬ ಆಚರಣೆಯನ್ನು ಟಿ.ನರಸೀಪುರ ತಾಲೂಕು ಜೆಡಿಎಸ್ ಕಾರ್ಯಕರ್ತರ ವತಿಯಿಂದ ಆಚರಣೆ ಮಾಡಲಾಯಿತು.
ಗ್ರಾಮ ಪಂಚಾಯತಿ ಮಹಿಳಾ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ವರುಣ ಗ್ರಾಮಪಂಚಾಯಿತಿ ಕಾರ್ಯದರ್ಶಿ-1 ದಿವ್ಯಾ ಆತ್ಮಹತ್ಯೆ ಯತ್ನಿಸಿದ್ದಾರೆ.