ಮೈಸೂರು : ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ ಪತ್ರಿಕಾ ಛಾಯಾಗ್ರಾಹಕರ ರಾಜ್ಯಮಟ್ಟದ ಸುದ್ದಿ ಛಾಯಾಚಿತ್ರ ಸ್ಪರ್ಧೆ ನಡೆಸಲಾಯಿತು. ಸಿಎಂ ಸಿದ್ದರಾಮಯ್ಯ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಕೊಡಮಾಡಲ್ಪಟ್ಟಿದೆ.

ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಪ್ರಶಸ್ತಿ ಪ್ರದಾನ ಸಮಾರಂಭವನ್ನ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

ಪ್ರಶಸ್ತಿ ವಿಜೇತ ಛಾಯಾಗ್ರಾಹಕರನ್ನು ಸಿಎಂ ಸನ್ಮಾನಿಸಿದರು. ವಿವಿಧ ಜಿಲ್ಲೆಗಳಿಂದ ಪತ್ರಿಕಾ ಛಾಯಾಚಿತ್ರಗ್ರಾಹಕರು ಆಗಮಿಸಿದ್ದರು. ನೈತಿಕ ಮೌಲ್ಯ, ನೈಜ ಪತ್ರಿಕೋದ್ಯಮ ಮಾಡಲು ಮಾಧ್ಯಮ ಪ್ರತಿನಿಧಿಗಳಿಗೆ ಸಿಎಂ ಸಲಹೆ ನೀಡಿದರು.