ಮೈಸೂರು: ಹುಲಿಯಿಂದ ದಾಳಿಗೊಳಗಾದ ವ್ಯಕ್ತಿ ಆರೋಗ್ಯ ಸ್ಥಿತಿ ಬಗ್ಗೆ ಆಪೊಲೊ ಆಸ್ಪತ್ರೆಯ ಕನ್ಸಲ್ಟೆಂಟ್ ಪ್ಲಾಸ್ಟಿಕ್ ಸರ್ಜನ್ ಡಾ. ಸತೀಶ್ ಮಾಹಿತಿ ನೀಡಿದ್ದಾರೆ.

ದಾಳಿಗೊಳಗಾದ ವ್ಯಕ್ತಿಯ ಮುಖದ ಮೂಳೆಗಳೆಲ್ಲ ಮುರಿದಿದ್ದವು. ಅಪರೇಷನ್ ಮಾಡಿ ಅವೆಲ್ಲವನ್ನು ಸರಿ ಮಾಡಲಾಗಿದೆ. ಸದ್ಯ ವೆಂಟಿಲೇಟರ್  ಮೂಲಕ ಉಸಿರಾಟ ನೆಡೆಸುತ್ತಿದ್ದಾನೆ. ಸದ್ಯದ ಪರಿಸ್ಥಿತಿಯಲ್ಲಿ ವ್ಯಕ್ತಿ ಸ್ಥಿತಿ  ಕ್ರಿಟಿಕಲ್ ಇದೆ. ಬಿಪಿ ಎಲ್ಲವೂ ನಾರ್ಮಲ್ ಇದೆ ಆದರೂ ಈಗಲೇ ಏನು ಹೇಳುಲು ಸಾಧ್ಯವಾಗೊಲ್ಲ.

ಮೆದುಳಿಗೂ ಸ್ಪಲ್ಪ ಪ್ರಮಾಣದ ಹಾನಿ ಆಗಿದೆ. ಬಲಗಣ್ಣು ಸಂಪೂರ್ಣವಾಗಿ ಹೋಗಿದೆ, ಎಡಗಣ್ಣು ಬಹುತೇಕ ಹಾನಿ ಆಗಿದೆ. ಎಡಗಣ್ಣಿನ ದೃಷ್ಟಿ ಉಳಿಸಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಸದ್ಯ ವ್ಯಕ್ತಿ ಸ್ಥಿತಿ ಇನ್ನೂ ಕ್ರಿಟಿಕಲ್ ಇದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಡಾ. ಸತೀಶ್ ಹೆಚ್.ವಿ ಮಾಹಿತಿ ನೀಡಿದ್ದಾರೆ.