ಮೈಸೂರು : ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಂಗಳದಲ್ಲೇ ಎಣ್ಣೆ ಪಾರ್ಟಿ ನಡೆಯುತ್ತಿದ್ದು, ಗ್ಲಾಸ್ ಹಿಡಿದು ರೆಡ್ಹ್ಯಾಂಡ್ ಆಗಿ ನೌಕರ ಸಿಕ್ಕಿಬಿದ್ದಿದ್ದಾರೆ.
ನೌಕರರನ್ನ ಹಿಡಿತದಲ್ಲಿಟ್ಟುಕೊಳ್ಳದ ಜಂಟಿ ನಿರ್ದೇಶಕ ರಂಗೇಗೌಡ. ಕಚೇರಿ ಆವರಣದಲ್ಲೇ ಎಣ್ಣೆ ಪಾರ್ಟಿ ಮಾಡ್ತಿದ್ದರೂ ರಂಗೇಗೌಡ ಕ್ಯಾರೆ ಎನ್ನುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆ ಜವಾನ ನಂಜುಂಡಸ್ವಾಮಿ ಎಂಬವರಿಂದ ಎಣ್ಣೆ ಪಾರ್ಟಿ ನಡೆಯುತ್ತಿದ್ದು, ಮೈಸೂರಿನ ಜಂಟಿ ಆಯುಕ್ತರ ಕಚೇರಿ ಆವರಣದಲ್ಲಿ ಘಟನೆ ನಡೆದಿದೆ.
ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಇಲಾಖೆ ಕಚೇರಿ ಇದ್ದು, ಕಳೆದ ವಾರದ ಹಿಂದೆಯಷ್ಟೇ ಇದೇ ಇಲಾಖೆಯಲ್ಲಿ ಹೆಚ್.ಡಿ ಕೋಟೆಯ ಕಲ್ಯಾಣ ಅಧಿಕಾರಿ ರಾಮಸ್ವಾಮಿ ಡ್ಯೂಟಿ ಟೈಮಲ್ಲೇ ಎಣ್ಣೆ ಪಾರ್ಟಿಮಾಡಿದ್ರು. ಕಚೇರಿಯಲ್ಲಿ ಸಹಿ ಹಾಕಿ ಫೀಲ್ಡ್ ವರ್ಕ್ ನೆಪದಲ್ಲಿ ಎಣ್ಣೆ ಹೊಡೆದು ಪಾರ್ಟಿ ಮಾಡ್ತಿದ್ದ ರಾಮಸ್ವಾಮಿ ವಿಡಿಯೋ ವೈರಲ್ ಆಗಿತ್ತು.
ಇದಕ್ಕೂ ಮುಂಚೆ ಇದೇ ಇಲಾಖೆಯಲ್ಲಿ ವಾರ್ಡನ್ಗಳ ನಿಯೋಜನೆ ವಿಚಾರದಲ್ಲಿ ಅಕ್ರಮ ನಡೆದಿತ್ತು. ಮೈಸೂರು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಅಕ್ರಮ ವಾರ್ಡನ್ ನಿಯೋಜನೆ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆಯೂ ಯಾವುದೇ ಕ್ರಮಕ್ಕೆ ರಂಗೇಗೌಡ ಮುಂದಾಗಲಿಲ್ಲ.
ಇದೀಗ ಕಚೆರಿ ಆವರಣದಲ್ಲಿ ಎಣ್ಣೆ ಪಾರ್ಟಿ ನಡೆಯುತ್ತಿದ್ದು, ಅಲ್ಲದೆ ಕಚೇರಿ ಒಳ ಭಾಗದಲ್ಲಿ ಸಿಬ್ಬಂದಿಯೊಬ್ಬರಿಗೆ ವಾಸಕ್ಕೆ ಕೊಠಡಿ ನೀಡಿರುವ ಆರೋಪವೂ ಇದೆ. ಸಮಾಜ ಕಲ್ಯಾಣ ಸಚಿವರ ತವರಲ್ಲೇ ಅಕ್ರಮ ನಡೆಯುತ್ತಿದೆ. ತಮ್ಮ ಇಲಾಖೆಯಲ್ಲಿನ ಅಕ್ರಮದ ಬಗ್ಗೆ ಸಚಿವ ಹೆಚ್.ಸಿ ಮಹದೇವಪ್ಪ ತಲೆಕೆಡಿಸಕೊಳ್ಳಲಿಲ್ಲ.

