ಮೈಸೂರು: ಪೆರೋಲ್ ರಜೆ ಮೇಲೆ ಬಿಡುಗಡೆಯಾದ ಸಜಾ ಖೈದಿ ನಾಪತ್ತೆಯಾದ ಘಟನೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಬೆಳಕಿಗೆ ಬಂದಿದೆ.ಸಜಾ ಖೈದಿಯನ್ನ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಕಾರಾಗೃಹದ ಅಧೀಕ್ಷಕರಾದ ಮೋಹನ್ ಕುಮಾರ್ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿವಿಧ ಪ್ರಕರಣಗಳಲ್ಲಿ ಸಜಾ ಖೈದಿಯಾಗಿರುವ ಪ್ರಸಾದ್ @ಗೂಂಡಾ ನಾಪತ್ತೆಯಾದವನು.ಬೆಂಗಳೂರು ನ್ಯಾಯಾಲಯ ಹಾಗೂ ಹಾಸನ ಜಿಲ್ಲೆ ಚೆನ್ನರಾಯಪಟ್ಟಣ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳಲ್ಲಿ ಈತ ಸಜಾ ಖೈದಿಯಾಗಿದ್ದಾನೆ.
ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಯನ್ನೂ ಅನುಭವಿಸುತ್ತಿದ್ದಾನೆ.ಈತನನ್ನ ಹಾಸನ ಕಾರಾಗೃಹದಿಂದ ಮೈಸೂರು ಕೇಂದ್ರ ಕಾರಾಗೃಹಕ್ಕೆ 21-07-2024 ರಂದು ರವಾನಿಸಲಾಗಿತ್ತು. ಹೈ ಕೋರ್ಟ್ ಆದೇಶದಂತೆ ಈತನಿಗೆ ಪೆರೋಲ್ ನಲ್ಲಿ ಬಿಡುಗಡೆಗೆ ಮಾಡಲಾಗಿತ್ತು.
19-09-2025 ರಿಂದ 18-10-2025 ರ ವರೆಗೆ ಒಂದು ತಿಂಗಳ ಪೆರೋಲ್ ರಜೆ ನೀಡಲಾಗಿತ್ತು.18-10-2025 ರಂದು ಪ್ರಸಾದ್@ಗೂಂಡಾ ವಾಪಸ್ ಬಂದಿರುವುದಿಲ್ಲ.ಈತನ ವಿರುದ್ದ ಹಾಗೂ ಜಾಮೀನು ನೀಡಿದ ತಂದೆ ಪ್ರಕಾಶ್ ಹಾಗೂ ರಂಜಿತ್ ಕುಮಾರ್ ಮೂವರ ವಿರುದ್ದ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

