ಮೈಸೂರು: ಜಾತಿ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿಯಾಗಿ ಸಂದೇಶ ಹಾಕಿದ ಸರ್ಕಾರಿ ಶಾಲೆ ದೈಹಿಕ ಶಿಕ್ಷಕ ಅಮಾನತಾಗಿದ್ದಾರೆ. ಹೆಚ್.ಡಿ. ಕೋಟೆ ಪಟ್ಟಣದ ಯರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕ ರವಿ ಅಮಾನತಾದವರು.

ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಎಡಗೈ ಜಿಲ್ಲಾ ನೌಕರರ ಸಂಘದ ಗ್ರೂಪ್ ಗೆ ಸಂದೇಶ ಹಾಕಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ .ಮಹದೇವಪ್ಪ ಬಗ್ಗೆ  ಟೀಕೆ ಮಾಡಿದ್ದರು. ನಾನು ಕಳೆದ 18ವರ್ಷಗಳಿಂದ ಸರ್ಕಾರಿ ಶಾಲೆ ದೈಹಿಕ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಶಾಲೆಯಲ್ಲಿ ಹೊಲೆಯ ವಿದ್ಯಾರ್ಥಿಗಳಿಗೆ ಬೋದನೆ ಮಾಡುತ್ತಿದ್ದೇನೆ.ರಾಜ್ಯ ಮಟ್ಟದ ಕ್ರೀಡೆಯಲ್ಲಿ ಪ್ರಶಸ್ತಿಗೂ ಕಾರಣನಾಗಿದ್ದೇನೆ.

ನನ್ನ ಶಾಲೆಯಲ್ಲಿರುವುದು ಎಲ್ಲಾ ಹೊಲೆಯ ವಿದ್ಯಾರ್ಥಿಗಳೆ.ನನ್ನ ಎಡಗೈ ಸಮುದಾಯದ ಒಬ್ಬ ವಿದ್ಯಾರ್ಥಿ ಶಾಲೆಯಲ್ಲಿ ಇಲ್ಲ.ಇದು ನನಗೆ ನೋವುಂಟು ಮಾಡಿದೆ.ಇದರಿಂದ ಬೇಸತ್ತು ದೈಹಿಕ ಶಿಕ್ಷಕ ಹುದ್ದೆಗೆ ರಾಜಿನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಗ್ರೂಪ್‌ನಲ್ಲಿ ಸಂದೇಶ ಕಳುಹಿಸಿದ್ದರು. ಹೊಲೆಯ ಸಮುದಾಯದ ವಿದ್ಯಾರ್ಥಿಗಳಿಗೆ ಸೀಮಿತವಾದ ನನ್ನ ಬೋದನೆ ನನ್ನ ಸಮುದಾಯಕ್ಕೆ ದಕ್ಕದೇ ಇರುವುದು ನೋವುಂಟು ಮಾಡಿದೆ ಎಂದು ಹಾಕಿದ್ದರು.

ಶಿಕ್ಷಕನ ಜಾಲತಾಣದ ಸಂದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಿಇಒಗೆ ಶಿಕ್ಷಕ ರವಿ ವಿರುದ್ದ  ಬಲಗೈ ಸಮಾಜದ ಮುಖಂಡರು ದೂರು ನೀಡಿದ್ದರು. ಜಾಲತಾಣದ ಸಂದೇಶ ಮತ್ತು ಸಮುದಾಯದ ವಿರುದ್ದ ಪ್ರಚೋದನಕಾರಿ ಹೇಳಿಕೆ ಎಂದು ಆರೋಪ ಮಾಡಿದ್ದರು. ಬಿಇಒ ವರದಿ ಆಧರಿಸಿ ಶಿಕ್ಷಕ ಎಸ್.ಎಲ್.ರವಿ ರವರ ವಿಚಾರಣೆ ಕಾಯ್ದಿರಿಸಿ ಅಮಾನತು ಆದೇಶ ಹೊರಡಿಸಲಾಗಿದೆ.