ಮೈಸೂರು: ಹೆಚ್.ಡಿ. ಕೋಟೆ ತಾಲ್ಲೋಕಿನ ಬೂದನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸ್ವಾಮಿಗೌಡ ಸಹಶಿಕ್ಷಕಿ ಮಧುಶ್ರೀ ಎಂಬುವವರು ಹೆಚ್.ಡಿ. ಕೋಟೆಯಿಂದ ಬೂದನೂರಿಗೆ ಜಾತಿ ಸಮೀಕ್ಷೆ ಸರ್ವೆ ಕಾರ್ಯಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಬೂದನೂರು ಗ್ರಾಮದ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಕಾರ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಸ್ವಾಮಿಗೌಡ ಮತ್ತು ಮಧುಶ್ರೀ ಬಲವಾದ ಪೆಟ್ಟುಬಿದ್ದು ಸದ್ಯ ಪ್ರಾಣಾಪಾಯಯಿಂದ ಪಾರಾಗಿದ್ದಾರೆ.
ಅಪಘಾತದಿಂದ ಆಘಾತವಾದ ಇಬ್ಬರು ಶಿಕ್ಷಕರನ್ನ ಅಕ್ಕಪಕ್ಕದವರು ಹೆಚ್.ಡಿ ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ . ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿರುವ ಸ್ವಾಮಿಗೌಡರ ಬಲಕಾಲಿಗೆ ಬಲವಾದ ಪೆಟ್ಟಾಗಿದ್ದು ಶಸ್ತ್ರಚಿಕಿತ್ಸೆ ಮಾಡಲಾಗಿದೆ ಹಾಗೆ ಮಧುಶ್ರೀ ರವರ ಎಡಕಾಲಿಗೂ ಪೆಟ್ಟಾಗಿ ಅವರಿಗೂ ಸಹ ಶಸ್ತ್ರಚಿಕಿತ್ಸೆ ಮಾಡಲಾಗಿದೆ. . ಇಬ್ಬರಿಗೂ ದೇಹದ ಇತರೆ ಭಾಗದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿದ ತಹಶಿಲ್ದಾರ್ ಶ್ರೀನಿವಾಸ್, ಬಿಇಒ ರಾಜು ರವರು ಭೇಟಿ ನೀಡಿ ಇಬ್ಬರಿಗೂ ಸಾಂತ್ವನ ಹೇಳಿದ್ದಾರೆ ಮತ್ತು ಮುಂದಿನ ಕ್ರಮಕ್ಕೆ ಆದೇಶ ನೀಡಿದ್ದಾರೆ. ಪ್ರಕರಣ ಎಚ್.ಡಿ. ಕೋಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

