Showing 20 of 2245 posts • Page 19 of 113
ಶಾಲೆಗಳಿಗೆ ಕೇಸರಿ ಶಾಲು ಹಾಕಿಕೊಂಡು ಬರುವಂತಿಲ್ಲ. ಕೇಸರಿ ಪೇಟಕ್ಕೂ ಅವಕಾಶ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಡಿವೈಎಸ್ಪಿ ಆಗಿ ಎಂ.ಧರ್ಮೇಂದ್ರ ರವರು ನೇಮಕಗೊಂಡು ಅಧಿಕಾರ ಸ್ವೀಕರಿಸಿದರು. ವರ್ಗಾವಣೆಗೊಂಡ ಡಿವೈಎಸ್ಪಿ ರಘು ಅವರು ಅಧಿಕಾರ ಹಸ್ತಾಂತರಿಸಿದರು.
: ಸರ್ಕಾರಿ ಕಛೇರಿಯಲ್ಲಿ ಗಂಟೆ 10: 30 ಆದ್ರೂ ಇನ್ನೂ ಬಾಗಿಲನ್ನು ತೆರೆದಿಲ್ಲ, ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದೆ ಇರುವುದರಿಂದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರುತ್ತಲೇ ಇದೆ.ಇದರಿಂದಾಗಿ ಮೃಗಾಲಯದಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಅಪಾಯ ಸಂಭವಿಸಬಹುದು ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಬಹಿಷ್ಕಾರ ಹಿನ್ನೆಲೆ ಮಾರಾಮಾರಿ ಹಲ್ಲೆ ನಡೆದಿದ್ದು, ನಂಜನಗೂಡು ತಾಲ್ಲೂಕಿನ ಬಂಕಹಳ್ಳಿ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ.
ಮೇ. 15 ರಂದು ಶುಕ್ರವಾರ ಮೈಸೂರಿನಲ್ಲಿ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಮಿತಿ, ಮೈಸೂರು ಇವರ ವತಿಯಿಂದ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ 135ನೇ ವರ್ಷದ ಜನ್ಮದಿನದ ಅಂಗವಾಗಿ ಬಹುತ್ವ ಭಾರತ ಮತ್ತು ಸಂವಿಧಾನವನ್ನು ಅಸ್ಥಿರಗೊಳಿಸುತ್ತಿರುವ ಕೋಮುವಾದಿ ಶಕ್ತಿಗಳು ಎಂಬ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ ತಿಳಿಸಿದರು.
ವಿವಿಧ ಕಾಮಗಾರಿಗಳಲ್ಲಿ ಅಕ್ರಮವೆಸಗಿ ಬರೋಬರಿ ಎರಡು ಕೋಟಿ ರೂ.ಅನುದಾನವನ್ನು ನುಂಗಿ ನೀರು ಕುಡಿದಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿ ದೇವರಸನಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಎಂ.ಮಹದೇವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಫೇಸ್ ಬುಕ್ ಮೂಲಕ ಪರಿಚಯವಾದ ಲಂಡನ್ ನಿವಾಸಿಯೊಬ್ಬ ಮೈಸೂರಿನ ಗೃಹಿಣಿಗೆ 12.65 ಲಕ್ಷ ವಂಚಿಸಿದ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಶಕ್ತಿನಗರದ ನಿವಾಸಿ ಸರ್ಕಾರಿ ಉದ್ಯೋಗಿ ಪತ್ನಿ ವೇದಾ(40) ಹಣ ಕಳೆದುಕೊಂಡವರು
ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಬಸವ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ ಬಸವಣ್ಣರವರನ್ನ ಸ್ಮರಣೆ ಮಾಡುವ ಜೊತೆಗೆ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗಳಿಗೆ ಮಹತ್ವ ಬರುತ್ತದೆ ಎಂದು ಜಗದ್ಗುರು ಶ್ರೀ ಶಿವರಾತ್ರಿಶ್ವರ ದೇಶಿ ಕೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ಕ್ರಿಕೆಟ್ ಆಡುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಟಿಎಂ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ನಗರದ ದೇವರಾಜ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ಯಾಂಪ್ರಸಾದ್ (46) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಪೊಲೀಸ್ ಲೇಔಟ್ನಲ್ಲಿ ನಡೆದಿದೆ.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರ ಜಯಂತೋತ್ಸವ ಹಾಗೂ ದಿ.ಆರ್ ಧ್ರುವನಾರಾಯಣ್ ರವರ 65ನೇ ಹುಟ್ಟು ಹಬ್ಬದ ಪ್ರಯುಕ್ತ ಶಂಕರಪುರ ಹತ್ತು ಜನಗಳ ಗರಡಿ ವತಿಯಿಂದ ರಾಜ್ಯಮಟ್ಟದ ಹೊನಲು ಬೆಳಕಿನ ನಾಡ ಕುಸ್ತಿ ಪಂದ್ಯಾವಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಚಾಲನೆ ನೀಡಿದರು.
ತಾಲ್ಲೂಕಿನ ಹೆಡಿಯಾಲ ಸಮೀಪದ ಈರೇಗೌಡನಹುಂಡಿ ಗ್ರಾಮದಲ್ಲಿ ಬಿರುಗಾಳಿಯ ರಭಸಕ್ಕೆ ತೆಂಗಿನ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಎರಡು ವಿದ್ಯುತ್ ಕಂಬಗಳು ದರೆಗರುಳಿದ ಘಟನೆ ನಡೆದಿದೆ.
ಉಪದ್ರವ ಉಂಟು ಮಾಡಿ ಸಾರ್ವಜನಿಕರಿಗೆ ಶಾಂತಿ ಭಂಗ ಮಾಡಿದ ವ್ಯಕ್ತಿಗೆ ನಂಜನಗೂಡು ಪ್ರಧಾನ ಸಿವಿಲ್ ನ್ಯಾಯಾಲಯ ಸೇವೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ರಾತ್ರಿ ಸುರಿದ ಗಾಳಿ ಮಳೆಗೆ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದ ಬಳಿ ಹಾಕಿದ್ದ ಶಾಮಿಯಾನ ನೆಲಕಚ್ಚಿದೆ.
: ರಸ್ತೆಯಲ್ಲಿ ಹರಡಿದ್ದ ಮಣ್ಣಿನ ವಿಚಾರಕ್ಕೆ ಗಲಾಟೆ ನಡೆದು ಮೂವರಿಗೆ ಗಾಯವಾಗಿ ಆಸ್ಪತ್ರೆ ದಾಖಲಾದ ಘಟನೆ ಹುಣಸೂರಿನ ಹತ್ತಿ ಮರ ಬೀದಿಯಲ್ಲಿ ನಡೆದಿದೆ.
ಆಹಾರ ಅರಸಿ ಬಂದು ಪಾಳು ಬಾವಿಗೆ ಬಿದ್ದಿದ್ದ ಹಂದಿಯನ್ನು ರಕ್ಷಣೆ ಮಾಡಿರುವ ಘಟನೆ ಹುಣಸೂರು ತಾಲೂಕಿನ ಹನಗೋಡು ಗ್ರಾಮದಲ್ಲಿ ನಡೆದಿದೆ.
ಯುವತಿಗೆ ಕಾಂಗ್ರೆಸ್ ಮುಖಂಡನಿಂದ ಮೋಸವಾಗಿದ್ದು, ಮದುವೆಯಾಗುವುದಾಗಿ ನಂಬಿಸಿ ಮದನ್ ರಾಜ್ ಕೈ ಕೊಟ್ಟಿದ್ದಾರೆ.
ನಗರದ ಬನ್ನಿಮಂಟಪ ಬಡಾವಣೆ, ರಾಡಿಕೋ ಡಿಸ್ಟಿಲರಿ ಸುತ್ತಮುತ್ತ, ಎನ್.ಆರ್.ಮೊಹಲ್ಲಾ ಹಾಗೂ ಸಿ.ವಿ ಮೊಹಲ್ಲಾಗಳಲ್ಲಿನ ಗೋಡನ್ಗಳು, ಗುಜರಿ ಅಂಗಡಿಗಳು ಹಾಗೂ ಇನ್ನಿತರ ಅನುಮಾನಸ್ಪದ ಸ್ಥಳಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದರು.
ಬಟ್ಟೆ ಬಿಚ್ಚಿ ಚರಂಡಿ ಸ್ವಚ್ಛತೆ ನಿವಾಸಿ ಇಳಿದ ಘಟನೆ ನಂಜನಗೂಡು ತಾಲ್ಲೂಕಿನ ಕುರಿಹುಂಡಿ ಗ್ರಾಮದಲ್ಲಿ ನಡೆದಿದೆ.