ಮೈಸೂರು: ಟ್ರೇಡಿಂಗ್ ನೆಪದಲ್ಲಿ ವೈದ್ಯರೊಬ್ಬರಿಗೆ 22 ಲಕ್ಷ ವಂಚಿಸಿದ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ವಿಜಯನಗರದ ನಿವಾಸಿ ವೃತ್ತಿಯಲ್ಲಿ ವೈದ್ಯರಾದ ಕಂಠೇಶ್ ಕೆ ಕಟ್ಟಿ ಎಂಬುವರೇ ವಂಚನೆಗೆ ಒಳಗಾದವರು.
ವಿಜಯ್ ಲೋದಾ ಎಂಬ ಹೆಸರಿನ ವ್ಯಕ್ತಿ ವಂಚಿಸಿದ ಖದೀಮ. ಕಂಠೇಶ್ ರವರನ್ನ ವಾಟ್ಸಾಪ್ ಗ್ರೂಪ್ ಗೆ ಸೇರಿಸಿ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿ ಹೆಚ್ಚಿನ ಲಾಭಾಂಶ ಆಮಿಷ ತೋರಿಸಿ ಹಂತ ಹಂತವಾಗಿ 22 ಲಕ್ಷ ಹೂಡಿಕೆ ಮಾಡಿಸಿದ್ದಾನೆ.
ನಂತರ ಸೆಬಿ ತಮ್ಮ ಖಾತೆಯನ್ನ ಫ್ರೀಜ್ ಮಾಡಿದೆ ಡೆಪಾಸಿಟ್ ನ 40% ಹಣ ಪಾವತಿಸಿದ್ರೆ ಹೂಡಿಕೆ ಹಣ ಬಿಡುಗಡೆ ಆಗುವುದಾಗಿ ಕಂಡಿಷನ್ ಹಾಕಿದಾಗ ವಂಚನೆಗೆ ಒಳಗಾಗಿರುವುದು ಖಚಿತವಾಗಿದೆ. ಕೂಡಲೇ ಕಂಠೇಶ್ ರವರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

