ನಂಜನಗೂಡು: ಮಾರ್ಚ್ 03 ರಂದು ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿಯ ದೇವಾಲಯದಲ್ಲಿ ಗ್ರಹಣ ದಿನದಂದು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಭಕ್ತರು ಎಂದಿನಂತೆ ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆಯಬಹುದಾಗಿದೆ.
ಮಾರ್ಚ್ 03 ರಂದು ಹುಣ್ಣಿಮೆ ಇರುವುದರಿಂದ ಮುಂಜಾನೆ 4 ಗಂಟೆಯಿಂದ ರಾತ್ರಿ 8:30 ತನಕ ಭಕ್ತರಿಗೆ ದೇವರ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಮುಂಜಾನೆಯಿಂದಲೇ ದೇವರಿಗೆ ಪೂಜೆ ಕೈಂಕಾರ್ಯಗಳನ್ನು ನಡೆಸಲಾಗುತ್ತದೆ.
ಗ್ರಹಣ ಮೋಕ್ಷ ಮುಗಿದ ನಂತರ ಮಹಾ ನೈವೇದ್ಯ ನೆರವೇರಿಸಲಾಗುವುದು. ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಇದ್ದರೂ ಕೂಡ ದೇವಾಲಯ ತೆರೆದಿರುತ್ತದೆ. ಸಾರ್ವಜನಿಕರು ಮತ್ತು ಭಕ್ತರು ಆಗಮಿಸಿ, ದೇವರ ದರ್ಶನವನ್ನು ಪಡೆದುಕೊಳ್ಳಬಹುದು ಎಂದು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ತಿಳಿಸಿದ್ದಾರೆ.

