ಮೈಸೂರು: ಅಮೆರಿಕ ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸುಪ್ರೀಂ ಲೀಡರ್ ಸಾವು ವಿಚಾರವಾಗಿ ಮೈಸೂರು ಪಿರಿಯಾಪಟ್ಟಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಶಿಯಾ ಮುಸ್ಲಿಂ ಸಮುದಾಯದಿಂದ ಮೇಣದಬತ್ತಿ ಬೆಳಗಿ ಮೌನ ಪ್ರತಿಭಟನೆ ನಡೆಸಲಾಯಿತು.
ಕಪ್ಪು ಉಡುಗೆ, ಕಪ್ಪು ಪಟ್ಟಿ ಧರಿಸಿ ಭಾವಚಿತ್ರ ಹಿಡಿದು ಮೆರವಣಿಗೆ ಮಾಡಿದರು. ಪಟ್ಟಣದಲ್ಲಿ ನೀರವ ಮೌನದ ವಾತಾವರಣವಿದ್ದು, ಖಮೇನಿ ಸಾವಿನ ಸುದ್ದಿಯಿಂದ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. “ಶಾಂತಿ ಮಂತ್ರ ಹೇಳುತ್ತಾ ದ್ವಂದ್ವ ನೀತಿ ಅನುಸರಿಸಿದ್ದಾರೆ. ಈ ಯುದ್ಧ ಅಗತ್ಯವಿರಲಿಲ್ಲ, ನಮ್ಮ ಹೋರಾಟ ಮುಂದುವರಿಯುತ್ತದೆ. ಪ್ರತಿಭಟನೆಯಲ್ಲಿ ಶಿಯಾ ಸಮುದಾಯದ ಮುಖಂಡರು, ಯುವಕರು ಭಾಗಿಯಾದರು.

